Operation Lotus | ಬಿಜೆಪಿಗೆ 12 ಬಾಗಿಲುಗಳಿವೆ, ಕಮಲಕ್ಕೆ ‘ಆಪರೇಷನ್’ ಆಧಾರ, ಡಿಕೆಶಿ ಮಾಡಿದ ಆರೋಪಗಳೇನು?

DK Shivakumar

 

 

ಸುದ್ದಿ ಕಣಜ.ಕಾಂ | KARNATAKA | 29 OCT 2022
ಶಿವಮೊಗ್ಗ: ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಸುಪ್ರೀಂ ಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿ ಸುಮೋಟೊ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

VIDEO REPORT

READ | ಚೋರಡಿ ಬಳಿ ಬಸ್, ಆಟೋ, ಬೈಕ್ ನಡುವೆ ಸರಣಿ ಅಪಘಾತ, ಸಹಾಯಕ್ಕೆ ಧಾವಿಸಿದ 112 

ಭಾರತ ಜೋಡೋ ಯಾತ್ರೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ನಮ್ಮ ರಾಜ್ಯದಲ್ಲಿನ ಯಾತ್ರೆ ಇತರರಿಗೆ ಮಾದರಿಯಾಗಿದ್ದು, ತೆಲಂಗಾಣದಲ್ಲೂ ನಮ್ಮದೇ ಮಾದರಿಯಲ್ಲಿ ಮುಂದುವರಿದಿದೆ. ಕರ್ನಾಟಕದಲ್ಲಿ ಇದನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಹೇಗೆ ತೆಗೆದುಕೊಂಡು ಹೋಗಬೇಕು? ಎಂಬುದರ ಬಗ್ಗೆ ಭಾನುವಾರ ಪಕ್ಷದ ನಾಯಕರೆಲ್ಲರೂ ಸೇರಿ ಚರ್ಚೆ ಮಾಡುತ್ತೇವೆ. ಇದು ಕೇವಲ 21 ಕ್ಷೇತ್ರಗಳಲ್ಲಿ ಮಾತ್ರವಲ್ಲ, ಎಲ್ಲ 224 ಕ್ಷೇತ್ರಗಳಲ್ಲೂ ಪ್ರಭಾವ ಬೀರಬೇಕು ಎಂದು ಹೇಳಿದರು.

ಬಿಜೆಪಿ ಮನೆಯಲ್ಲೇ ಹನ್ನೆರಡು ಬಾಗಿಲುಗಳಾಗಿವೆ. ಅವರದು ಬಿಜೆಪಿ, ಕಾಂಗ್ರೆಸ್ ಹಾಗೂ ದಳದ ಸಮ್ಮಿಶ್ರ ಸರ್ಕಾರವಾಗಿದೆ. ಅವರಲ್ಲಿ ಏನೆಲ್ಲ ನೋವಿದೆ ಎಂಬುದರ ಬಗ್ಗೆ ಈಶ್ವರಪ್ಪ ಅವರನ್ನೇ ಕೇಳಿ.
| ಡಿ.ಕೆ.ಶಿವಕುಮಾರ್, ಅಧ್ಯಕ್ಷ, ಕೆಪಿಸಿಸಿ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹುಟ್ಟಿರುವುದೇ ಭ್ರಷ್ಟಾಚಾರದಲ್ಲಿ…
ಸಚಿವ ಎಂಟಿಬಿ ನಾಗರಾಜ್ ಅವರ ಆಡಿಯೋ ಲೀಕ್ ಬಗ್ಗೆ ಪ್ರಶ್ನೆ ಕೇಳಿದಾಗ, `ಈ ಸರ್ಕಾರ ಹುಟ್ಟಿರುವುದೇ ಆಪರೇಷನ್ ಕಮಲ ಎಂಬ ಭ್ರಷ್ಟಾಚಾರದಲ್ಲಿ. ಇದರಲ್ಲಿ ಎಂಟಿಬಿ ನಾಗರಾಜ್ ಅವರು ಕೂಡ ಸೇರಿದ್ದಾರೆ. ನಿನ್ನೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಮುಂದಾದಾಗ ಕೋಟಿ- ಕೋಟಿ ಹಣ ಸಿಕ್ಕಿದೆ. ರಾಜ್ಯದಲ್ಲೂ ಇದೇ ಮಾದರಿಯಲ್ಲಿ ನಡೆದಿದೆ ಎಂದು ಹಿಂದೆ ಶಾಸಕ ಶ್ರೀನಿವಾಸ್ ಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಆದರೆ, ಸರ್ಕಾರ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿತು. ದೆಹಲಿ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.

READ | ಕ್ರಿಮಿನಲ್’ಗಳ ಜಾತಕ ಬಿಚ್ಚಿಡಲು ಪೊಲೀಸರ ಟೆಕ್ನಾಲಜಿ ಮೊರೆ, ಇನ್ಮುಂದೆ ರಾತ್ರಿ ವೇಳೆ‌ ಶಿವಮೊಗ್ಗದಲ್ಲಿ ನಿತ್ಯವೂ ಚೆಕಿಂಗ್

ಸುಪ್ರೀಂ ಕೋರ್ಟ್ ಸುಮೋಟೊ ಕೇಸ್ ದಾಖಲಿಸಲಿ
ಆಪರೇಷನ್ ಕಮಲದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು. ಆ ಮೂಲಕ ಈ ಅಕ್ರಮ ಕೊನೆಗೊಂಡು ಪ್ರಜಾಪ್ರಭುತ್ವ ಉಳಿಯಬೇಕಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಈ ವಿಚಾರದಲ್ಲಿ ಸುಮೋಟೊ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು. ಈ ಪ್ರಕರಣಗಳಿಗೆ ಪಿಎಂಎಲ್.ಎ ಹಾಗೂ ಹಣಕಾಸು ಅವ್ಯವಹಾರ ಅನ್ವಯವಾಗುವುದಿಲ್ಲವೇ? ಹೀಗಾಗಿ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಸತ್ಯಾಸತ್ಯತೆಯನ್ನು ಬೆಳಕಿಗೆ ತರಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಬಿರುಕಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ‘ಅವರ ಮನೆಯಲ್ಲೇ ಹನ್ನೆರಡು ಬಾಗಿಲುಗಳಾಗಿವೆ. ಅವರದು ಬಿಜೆಪಿ, ಕಾಂಗ್ರೆಸ್ ಹಾಗೂ ದಳದ ಸಮ್ಮಿಶ್ರ ಸರ್ಕಾರವಾಗಿದೆ. ಅವರಲ್ಲಿ ಏನೆಲ್ಲ ನೋವಿದೆ ಎಂಬುದರ ಬಗ್ಗೆ ಈಶ್ವರಪ್ಪ ಅವರನ್ನೇ ಕೇಳಿ’ ಎಂದರು.

https://suddikanaja.com/2022/10/29/today-gold-silver-rate-decline-in-karnataka/

Leave a Reply

Your email address will not be published. Required fields are marked *

error: Content is protected !!