HIGHLIGHTS
- ಡಾಗ್ ಶೋದಲ್ಲಿ ವಿವಿಧ ಜಾತಿಯ 150ಕ್ಕೂ ಅಧಿಕ ಶ್ವಾನಗಳು ಭಾಗಿ
- ಶಿವಮೊಗ್ಗ ಸೇರಿದಂತೆ ಉಡುಪಿ, ಮಂಗಳೂರು, ದಾವಣಗೆರೆ, ಭದ್ರಾವತಿ, ಹುಬ್ಬಳ್ಳಿಯಿಂದ ಶ್ವಾನಗಳ ಆಗಮನ
- ಡಾಗ್ ಶೋನದಲ್ಲಿ ಟಿಬೇಟಿಯನ್ ಮಾಸ್ಟಿಫ್ ಶ್ವಾನದ್ದೇ ದರ್ಬಾರ್
ಸುದ್ದಿ ಕಣಜ.ಕಾಂ | DISTRICT | 02 OCT 2022
ಶಿವಮೊಗ್ಗ: ಈ ಶ್ವಾನದ ಬೆಲೆ ಕೇಳಿದರೆ ಹೌಹಾರುವುದು ಗ್ಯಾರಂಟಿ. ಕಾರಣ ಇದರ ಬೆಲೆಯೇ ಅಷ್ಟಿದೆ.
ಟಿಬೇಟಿಯನ್ ಮಾಸ್ಟಿಫ್ (tibetan mastiff ) ಜಾತಿಯ ಈ ಶ್ವಾನದ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ. ಇದರ ಹೆಸರು ಭೀಮಾ. ಇದನ್ನು ವೀಕ್ಷಿಸುವುದಕ್ಕಾಗಿ ಶಿವಮೊಗ್ಗ ನಗರದಿಂದ ಜನಜಾತ್ರೆಯೇ ನೆರೆದಿತ್ತು.
READ | ಶಾರ್ಟ್ ಮೂವಿಗಳನ್ನು ಇಲ್ಲಿಗೆ ಕಳುಹಿಸಿ ಆಕರ್ಷಕ ಬಹುಮಾನ ಗೆಲ್ಲಿ, ಷರತ್ತುಗಳೇನು, ಕೊನೆ ದಿನಾಂಕ ಯಾವಾಗ?
ಬೆಂಗಳೂರಿನ ಸತೀಶ್ ಎಂಬುವವರಿಗೆ ಸೇರಿದ ಈ ಶ್ವಾನವನ್ನು ನಗರದ ಗಾಂಧಿ ಬಜಾರಿನಲ್ಲಿ ದಸರಾ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಡಾಗ್ ಶೋನಲ್ಲಿ ಇದನ್ನು ಕರೆದುಕೊಂಡು ಬರಲಾಗಿತ್ತು.
10 ಕೋಟಿ ಶ್ವಾನದ ನಿರ್ವಹಣೆಯೇನೂ ಕಡಿಮೆಯಲ್ಲ. ಇದಕ್ಕೆ ಇರಲು ಏಸಿ ರೂಮೇ ಬೇಕು. ಇದನ್ನು ಸತೀಶ್ ಅವರು ಬೀಜಿಂಗ್’ನಿಂದ ತಂದಿದ್ದಾರೆ. ಚಿಕನ್ ಫೇವರಿಟ್ ಫುಡ್.
– ಸತೀಶ್, ಬೆಂಗಳೂರು (10 ಕೋಟಿ ಶ್ವಾನದ ಮಾಲೀಕ)
ಸೆಲ್ಫಿಗಾಗಿ ಜನವೋ ಜನ
ಭೀಮಾನನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ನೋಡುವುದಕ್ಕೂ ಅತ್ಯಂತ ಆಕರ್ಷಕ ಮೈಮಾಟ ಹೊಂದಿದ್ದರಿಂದ ಇದರೊಂದಿಗೆ ಸೆಲ್ಫಿ ತೆಗೆದುಕೊಂಡರು.
15ಕ್ಕೂ ಅಧಿಕ ಜಾತಿಯ ಶ್ವಾನಗಳು ಭಾಗಿ
ಡಾಗ್ ಶೋದಲ್ಲಿ ಭೀಮಾನ ಆಕರ್ಷಣೆ ಒಂದೆಡೆಯಾದರೆ ಇದರೊಂದಿಗೆ ಹಸ್ಕಿ, ಜರ್ಮನ್ ಶೆಫರ್ಡ್, ಪಮೋರಿಯನ್, ಮುಧೋಳ್, ಗೋಲ್ಡನ್ ರಿಟ್ರೇವರ್, ರೊಟ್ವೀಲರ್ (rottweiler) ಸೇರಿದಂತೆ ಸುಮಾರು 15ಕ್ಕೂ ಅಧಿಕ ಜಾತಿಯ ಶ್ವಾನಗಳನ್ನು ಕರೆದುಕೊಂಡು ಬರಲಾಗಿತ್ತು.
https://suddikanaja.com/2022/09/11/person-who-has-fed-street-dog-if-that-dog-bite-someone-they-should-bear-money-for-treatment-said-sc/