Police raid | ಶಿವಮೊಗ್ಗದ ಹಲವೆಡೆ ಪೊಲೀಸರ ದಿಢೀರ್ ಕಾರ್ಯಾಚರಣೆ, ರಿಪೋರ್ಟ್ ಪಾಸಿಟಿವ್ ಇದ್ರೆ ಅಂದರ್, ಕಾರಣವೇನು?

police

 

 

ಸುದ್ದಿ ಕಣಜ.ಕಾಂ | DISTRICT | 17 OCT 2022
ಶಿವಮೊಗ್ಗ(Shivamogga): ನಗರ ವ್ಯಾಪ್ತಿಯಲ್ಲಿ ಜಿಲ್ಲಾ ಪೊಲೀಸರು ಖಡಕ್ ಹೆಜ್ಜೆ ಇಟ್ಟಿದ್ದಾರೆ. ಮಾದಕ ವಸ್ತು ಸೇವಿಸಿದವರ ಮೇಲೆ ಗೀವ್ರ ನಿಗಾ ಇಟ್ಟಿದೆ. ಅದರ ಭಾಗವಾಗಿಯೇ ನಗರದಲ್ಲಿ ಕಳೆದು ಎರಡ್ಮೂರು ದಿನಗಳಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಹಲವು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ‌ನಂತರ, ಅನುಮಾನಾಸದವಾಗಿ ಇರುವವರನ್ನು ಮೆಗ್ಗಾನ್ ಆಸ್ಪತ್ರೆ(Meggan hospital)ಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

READ | ಭದ್ರಾವತಿ ವ್ಯಕ್ತಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್

ರಿಪೋರ್ಟ್ ಪಾಸಿಟಿವ್ ಬಂದವರು ಅಂದರ್
ಮಾದಕದ್ರವ್ಯ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಒಂದುವೇಳೆ, ರಿಪೋಯ ಪಾಸಿಟಿವ್ ಬಂದರೆ ಅಂತವರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ (NDPS Act) ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ.
ಪ್ರತ್ಯೇಕ ಕಾರ್ಯಾಚರಣೆ ಮೂವರ ಬಂಧನ
ಅಣ್ಣಾನಗರ ರೇಡ್ ನಲ್ಲಿ ಫಾಜಿಲ್‌ ಹಾಗೂ ರಷೀದ್‌ ಮತ್ತು ಆರ್‌ಎಂಎಲ್‌ ನಗರದಲ್ಲಿನ ರೇಡ್ ನಲ್ಲಿ ಪ್ರಜ್ವಲ್‌ ಎಂಬುವವರನ್ನು ಬಂಧಿಸಲಾಗಿದೆ. ಸೋಮವಾರ ಸಂಜೆಯೂ ಕಾರ್ಯಾಚರಣೆ ನಡೆದಿದೆ. ಹಲವರನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ‌ ಎಷ್ಟು ಜನರ ವರದಿ ಪಾಸಿಟಿವ್ ಬಂದಿದೆ ಎನ್ನುವುದು ತಿಳಿದುಬರಬೇಕಿದೆ.

https://suddikanaja.com/2022/10/17/home-clearance-operation-at-malligenahalli-hakkipikki-camp-shivamogga/

Leave a Reply

Your email address will not be published. Required fields are marked *

error: Content is protected !!