Jobs in GESCOM | ಜೆಸ್ಕಾಂನಲ್ಲಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು, ಷರತ್ತುಗಳೇನು?

GESCOM JOB

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ(Gulbarga Electricity Supply Company Limited-ಜೆಸ್ಕಾಂ)ದಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹರು ಕೂಡಲೇ ಅರ್ಜಿ ಸಲ್ಲಿಸಲು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

JOBS FB Linkಅಭ್ಯರ್ಥಿಗಳು ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ನವೆಂಬರ್ 21ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಸೆಂಬರ್ 8 ಅಂತಿಮ ದಿನವಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಪ್ರಧಾನ ವ್ಯವಸ್ಥಾಪಕರು, ನಿಗಮ ಕಚೇರಿ, ಜೆಸ್ಕಾಂ, ಸ್ಟೇಷನ್ ರಸ್ತೆ, ಕಲಬುರಗಿ 585102 ಇವರಿಗೆ ತಲುಪಿಸಬೇಕು. ಪೂರ್ಣ ವಿವರ ಹಾಗೂ ದಾಖಲೆಗಳು ಲಗತ್ತಿಸದಿದ್ದರೆ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ನೇಮಕಾತಿ ಸಂಸ್ಥೆ ಜೆಸ್ಕಾಂ (GESCOM)
ಹುದ್ದೆ ಹೆಸರು ಪದವಿ, ಡಿಪ್ಲೋಮಾ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ 135
ಅಧಿಸೂಚನೆ ಕ್ಲಿಕ್
ಅಧಿಕೃತ ವೆಬ್‍ಸೈಟ್ ಕ್ಲಿಕ್
ಇನ್ನಷ್ಟು ಉದ್ಯೋಗ ಸುದ್ದಿ ಕ್ಲಿಕ್

ಅರ್ಜಿ ಸಲ್ಲಿಸುವ ಮುನ್ನು ಷರತ್ತು ತಿಳಿದುಕೊಳ್ಳಿ

  • ರಾಷ್ಟ್ರೀಯ ಶಿಶಿಕ್ಷು(ಅಪ್ರೆಂಟಿಸ್) ತರಬೇತಿ ಯೋಜನೆ ಅಡಿ ಎಂಜಿನಿಯರಿಂಗ್ ಪದವಿ ಮತ್ತು ಡಿಪ್ಲೋಮಾ ಹೊಂದಿರುವವರು ಅಕ್ಟೋಬರ್ 2019ರ ನಂತರ ಉತ್ತೀರ್ಣರಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • 2022-23 ಸಾಲಿನ ಶಿಶಿಕ್ಷು (ಅಪ್ರೆಂಟಿಸ್) ತರಬೇತಿಗೆ ಎಂಜಿನಿಯರಿಂಗ್ ಪದವಿ ಹಾಗೂ ಮೂರು ವರ್ಷದ ಡಿಪ್ಲೋಮಾ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅವಧಿಯ ತರಬೇತಿಗೆ ಅರ್ಜಿ ಸಲ್ಲಿಸಬಹುದು.
  • ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಧರರು/ ಡಿಪ್ಲೋಮಾದಾರರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಅದ್ಯತೆ ನೀಡಲಾಗುವುದು.
  • ಆರೋಗ್ಯವಂತ ದೃಢಕಾಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅಂಗವಿಕಲರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
  • ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳು ಊಟ/ ವಸತಿ ಹಾಗೂ ಇತರ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳತಕ್ಕದ್ದು.
  • ತರಬೇತಿಯ ಅವಧಿಯಲ್ಲಿ ತರಬೇತಿ ಸಂಸ್ಥೆಯ ನಿಯಮ/ ಶಿಸ್ತು ಪಾಲಿಸತಕ್ಕದ್ದು.
    2020, 2021, 2022ನೇ ಇಸವಿಯಲ್ಲಿ ಎಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಎಂಜಿನಿಯರಿಂಗ್ ಪಾಸಾಗಿರುವವರು. (ಅಕ್ಟೋಬರ್ 2019ರ ನಂತರ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಮಾತ್ರ ಆರ್ಹರಾಗಿರುತ್ತಾರೆ.)
  • ಈಗಾಗಲೇ ಅಪ್ರೆಂಟಿಸ್ ತರಬೇತಿ ಹೊಂದಿರುವವರು ತರಬೇತಿಗೆ ಅನರ್ಹರು. ವಯೋಮಿತಿ 18 ವರ್ಷಕ್ಕಿಂತ ಕಡಿಮೆ ಇರಬಾರದು.

ಅಭ್ಯರ್ಥಿಯ ವಿದ್ಯಾರ್ಹತೆ
ಎಂಜಿನಿಯರಿಂಗ್ ಪದವಿಧರ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರಬೇಕು), ಮೂರು ವರ್ಷದ ಡಿಪ್ಲೋಮಾ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಡಿಪ್ಲೋಮಾ ಸರ್ಟಿಫಿಕೇಟ್ ಹೊಂದಿರಬೇಕು.
ಅಪ್ರೆಂಟಿಸ್ ಹುದ್ದೆಯ ವೇತನ ಶ್ರೇಣಿ
ತರಬೇತಿ ಅವಧಿಯಲ್ಲಿ ಶಿಶಿಕ್ಷುಗಳ ಮಾಸಿಕ 9,000 ರೂ. (ಎಂಜಿನಿಯರಿಂಗ್ ಪದವಿ), 8000 ರೂ. (ಡಿಪ್ಲೋಮಾ ಎಂಜಿನಿಯರಿಂಗ್) ವೇತನ ನೀಡಲಾಗುವುದು.

https://suddikanaja.com/2022/11/28/manager-jobs-in-state-bank-of-india/

error: Content is protected !!