House rent | ಮನೆ ಬಾಡಿಗೆ ನೀಡುವ ಬಗ್ಗೆ ಶಿವಮೊಗ್ಗ ಪೊಲೀಸರಿಂದ ಮಹತ್ವದ ಸೂಚನೆ

YOUR ATTENTION PLZ

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲಾ ಪೊಲೀಸ್ ಮನೆಯ ಮಾಲೀಕರಿಗೆ (house owner) ಸೂಚನೆ ನೀಡಿದ್ದು, ಮನೆಯನ್ನು ಬಾಡಿಗೆ ನೀಡುವುದಕ್ಕೂ ಮುನ್ನ ವಹಿಸಬೇಕಾದ ಜಾಗರೂಕತೆಯ ಬಗ್ಗೆ ತಿಳಿಸಿದ್ದಾರೆ.
ಮಂಗಳೂರು (Mangaluru) ಆಟೋದಲ್ಲಿ ಕುಕ್ಕರ್ ಸ್ಫೋಟದ (blast case) ಬೆನ್ನಲ್ಲೇ ತನಿಖೆ ನಡೆಸಿದಾಗ ಆರೋಪಿಯು ಸುಳ್ಳು ದಾಖಲೆಗಳನ್ನು ನೀಡಿ ಮನೆ ಬಾಡಿಗೆ ಮಾಡಿದ್ದ ವಿಚಾರ ತಿಳಿದುಬಂದಿದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಮನೆಯ ಮಾಲೀಕರು ಬಾಡಿಗೆ ನೀಡುವುದಾಗಿ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

SP Mithun Kumar 1READ | ಅಡಿಕೆ ಎಲೆಚುಕ್ಕೆ ರೋಗದ ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟ ಕೃಷಿ ವಿಜ್ಞಾನಿ ಪ್ರೊ.ಪ್ರಕಾಶ್‌‌ ಕಮ್ಮರಡಿ, ಇದನ್ನು ಕೋವಿಡ್’ಗೆ ಹೋಲಿಸಲೇನು ಕಾರಣ?
ಇಂತಹವರು ಕಂಡುಬಂದರೆ ಮಾಹಿತಿ ನೀಡಿ
ಯಾವುದೇ ಅಪರಿಚಿತ ವ್ಯಕ್ತಿ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಹೊಸದಾಗಿ ತಮ್ಮ ಏರಿಯಾದಲ್ಲಿರುವ ಮನೆಗಳಲ್ಲಿ ವಾಸವಾಗಿದ್ದರೆ, ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಲ್ಲವೇ ಪೊಲೀಸ್ ಕಂಟ್ರೋಲ್ ರೂಂ ಅಥವಾ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

error: Content is protected !!