ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯವು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಪರೀಕ್ಷೆ ಬರೆಯುವುದಕ್ಕೆ ಅಂತಿಮ ಅವಕಾಶ ನೀಡಿದೆ.
READ | ಲೋಕಾಯುಕ್ತಕ್ಕೆ ಸುಳ್ಳು ದೂರು ನೀಡಿದರೆ ಹುಷಾರ್, ಲೋಕಾ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದ್ದೇನು?
ಯಾವ ಪರೀಕ್ಷೆ ಬರೆಯಲು ಲಾಸ್ಟ್ ಚಾನ್ಸ್?
ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕ ಪದವಿಗಳಿಗೆ 2003-04 ರಲ್ಲಿ ಹಾಗೂ ಆನಂತರ ಪ್ರವೇಶ ಪಡೆದ ಸೆಮಿಸ್ಟರ್ ಸ್ಕೀಂನಲ್ಲಿ ಅಧ್ಯಯನ ಮಾಡಿ, ಕೋರ್ಸ್ ಪೂರ್ಣಗೊಳಿಸಲು ನಿಗದಿಪಡಿಸಿಲಾಗಿದ್ದ ಅವಧಿ (ಡಬಲ್ ದ ಡ್ಯುರೇಷನ್) ಮುಗಿದರೂ ಸಹ ಇದುವರೆಗೆ ಪದವಿ ಪೂರ್ಣಗೊಳಿಸಲಾಗದೆ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೊನೆಯ ಅವಕಾಶವನ್ನು ನೀಡಲಾಗಿದೆ.
ಯಾವಾಗ ನಡೆಯಲಿವೆ ಪರೀಕ್ಷೆ?
ಇಂತಹ ವಿದ್ಯಾರ್ಥಿಗಳಿಗೆ ಏಪ್ರಿಲ್/ ಮೇ 2023ರ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಯೋಜಿಸಲಾಗಿದೆ. ಪರೀಕ್ಷಾ ಶುಲ್ಕ ಹಾಗೂ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.
https://suddikanaja.com/2023/01/05/home-minister-araga-jnanendra-help/