CEIR Portal | ಮಾಲೀಕರ ಕೈ ಸೇರಿದ 9 ಮೊಬೈಲ್, ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ

Mobile theft

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಳೆದಿದ್ದ 9 ಮೊಬೈಲ್ ಗಳು ಮತ್ತೆ ವಾರಸುದಾರರ ಕೈಸೇರಿವೆ‌. ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪಿಐ ಸಂತೋಷ್ ಎಂ. ಪಾಟೀಲ್ ಮತ್ತು ಸಿಬ್ಬಂದಿಯ ತಂಡವು CEIR Portal ಮೂಲಕ ಕಳವಾದ 9 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಸಿಇಐಆರ್ ಬಳಕೆ ಎಲ್ಲಿ, ಹೇಗೆ?
ಮೊಬೈಲ್ ಗಳು ಕಳ್ಳತನ, ದರೋಡೆ, ಸುಲಿಗೆ, ಕಳೆದುಹೋದ ಸಂದರ್ಭದಲ್ಲಿ ಶೀಘ್ರವಾಗಿ ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲು ಮತ್ತು ಮೊಬೈಲ್ ಗಳು ದುರುಪಯೋಗ ಆಗದಂತೆ ತಡೆಗಟ್ಟಲು ಅನುಕೂಲವಾಗುವ ನಿಟ್ಟಿನಲ್ಲಿ Central Equipment Identity Register (CEIR) Portal ಅನ್ನು ಅಭಿವೃದ್ಧಿ ಪಡಿಸಲಾಗಿದೆ.

READ | ಶಿವಮೊಗ್ಗದಲ್ಲಿ‌ ಎಷ್ಟು ಮತದಾರರಿದ್ದಾರೆ? ಮತಗಟ್ಟೆಗಳೆಷ್ಟು? ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಎಲ್ಲ ಕ್ಷೇತ್ರಗಳ ಕಂಪ್ಲೀಟ್ ರಿಪೋರ್ಟ್

ಮೊಬೈಲ್ ಫೋನ್ ಗಳು ಕಳವು/ ದರೋಡೆ/ ಸುಲಿಗೆ/ ಕಳೆದು ಹೋದ ಸಂದರ್ಭದಲ್ಲಿ ಸಾರ್ವಜನಿಕರು CEIR Portal ಗೆ ಲಾಗಿನ್ ಆಗಿ, ದೂರನ್ನು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಮನವಿ ಮಾಡಿದ್ದಾರೆ.
ಬುಧವಾರದಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಅವರು ಪತ್ತೆ ಮಾಡಲಾದ ಮೊಬೈಲ್ ಗಳನ್ನು, ಮಾಲೀಕರುಗಳಿಗೆ ಹಿಂದಿರುಗಿಸಿದರು.

Shivamogga police | ಕಳೆದ‌ ಮೊಬೈಲ್ ಹುಡುಕಾಟಕ್ಕೆ ಶಿವಮೊಗ್ಗ ಪೊಲೀಸರ ಹೊಸ ಟೆಕ್ನಾಲಜಿ, ಏನಿದರ ಲಾಭ?

error: Content is protected !!