SSP Scholarship | ವಿದ್ಯಾರ್ಥಿಗಳ ಗಮನಕ್ಕೆ, SSP ಆನ್ ಲೈನ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ, ಲಾಸ್ಟ್ ಡೇಟ್ ಯಾವುದು?

Exam study 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (Department of Backward Classes Welfare)ಯ ವತಿಯಿಂದ 2022-23ನೇ ಸಾಲಿಗೆ ಮೆಟ್ರಿಕ್ ನಂತರದ (Post metric) ವಿದ್ಯಾರ್ಥಿ ವೇತನ(scholarship), ಶುಲ್ಕ ವಿನಾಯಿತಿ (fee concession) ಮತ್ತು ವಿದ್ಯಾಸಿರಿ(vidhyasiri), ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ  ನೀಡಲು ಆಹ್ವಾನಿಸಲಾಗಿದ್ದ ಆನ್‌ಲೈನ್ ಅರ್ಜಿ ಅವಧಿಯನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ.

READ | ಸಿಮ್ಸ್’ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಯಲಿದೆ ಸಂದರ್ಶನ

ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1, ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಪಡೆಯಲು ವೆಬ್‌ಸೈಟ್ www.//ssp.postmatric.karnataka.gov.in ಹಾಗೂ ಹೆಚ್ಚಿನ ಮಾಹಿತಿಗಾಗಿ https://bcwd.karnataka.gov.in ಮತ್ತು ಕಚೇರಿಯ ಸಹಾಯವಾಣಿ 8050770005/ 08182-222129ಗೆ ಸಂಪರ್ಕಿಸಬಹುದಾಗಿದೆ ಎಂದು ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ  ಅಧಿಕಾರಿಗಳು ತಿಳಿಸಿರುತ್ತಾರೆ.

error: Content is protected !!