Antaraghattamma | 4 ವರ್ಷಗಳ ಬಳಿಕ ಅದ್ಧೂರಿ ಅಂತರಘಟ್ಟಮ್ಮ ಜಾತ್ರಾ ಮಹೋತ್ಸವ

Antaraghattamma

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
00: ಹೊಸಮನೆಯ ಅಂತರಘಟ್ಟಮ್ಮ, ಜಲದುರ್ಗಮ್ಮ ಮತ್ತು ಕೆಂಚರಾಯಸ್ವಾಮಿ ದೇವರ ಜಾತ್ರಾ ಮಹೋತ್ಸವವು ನಾಲ್ಕು ವರ್ಷಗಳ ಬಳಿಕ ಅದ್ಧೂರಿಯಾಗಿ ಜರುಗಿತು.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯು ಕೊರೊನಾದಿಂದಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ.

READ | ಶಿವಮೊಗ್ಗದಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆರಂಭ, ಯಾವೆಲ್ಲ ಕೋರ್ಸ್’ಗಳು ಲಭ್ಯ? ಪೂರ್ಣ ಮಾಹಿತಿ ಇಲ್ಲಿದೆ

ಶಕ್ತಿ ದೇವತೆಗಳ ಮೆರವಣಿಗೆ
ಶಕ್ತಿ ದೇವತೆಗಳ ಮೆರವಣಿಗೆಯು ವಿಜೃಂಬಣೆಯಿಂದ ಜರುಗಿತು. ದುರ್ಗಿಗುಡಿಯ ಶ್ರೀರಾಮ ಮಂದಿರದಿಂದ ಗಂಗೆ ಪೂಜೆಯೊಂದಿಗೆ ಶ್ರೀರಾಮ ಮಂದಿರದವರೆಗೆ ಗಂಗೆ ಪೂಜೆ ಮೂಲಕ ದೊಡ್ಡಮ್ಮ, ಜಲದುರ್ಗಮ್ಮ ದೇವರುಗಳನ್ನು ಹೊಸಮನೆಯ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಯಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚೆಂಡೆ, ವೀರಗಾಸೆ ಮತ್ತಿತರ ಕಲಾ ಪ್ರಕಾರಗಳು ಭಾಗಿಯಾಗಿದ್ದವು. ಭಕ್ತರು ಕೆಂಡ ಹಾಯ್ದು ಹರಕೆ ತೀರಿಸಿದರು. ನವವಿವಾಹತರು ಸಹ ಕೆಂಡ ಹಾಯ್ದರು.

Shivamogga DCC Bank | ಆರ್.ಎಂ.ಮಂಜುನಾಥ್ ಗೌಡಗೆ ನಿರ್ದೇಶಕ ಸ್ಥಾನ ರದ್ದತಿ ತೀರ್ಪು ವಜಾ, ಆರ್.ಎಂಎಂ ಗಂಭೀರ ಆರೋಪ

error: Content is protected !!