Shimoga Polling | ಮತದಾನದಲ್ಲಿ ಆರಂಭದ ವೇಗ ಕಳೆದುಕೊಂಡ ಭದ್ರಾವತಿ, ಜಿಲ್ಲೆಯಲ್ಲಿ ಭರಾಟೆಯ ಓಟಿಂಗ್

Voter ID

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಉತ್ತಮ ಮತದಾನ ದಾಖಲಾಗಿದೆ. ಹೆಚ್ಚು ಬಿಸಿಲು ಮತ್ತು ಮಳೆ ಇಲ್ಲದ್ದಕ್ಕೆ ಮಲೆನಾಡು ಭಾಗದಲ್ಲಿ ಉತ್ತಮ ಮತದಾನವಾಗಿದೆ. ಮತದಾನದಲ್ಲಿ ಬೆಳಗ್ಗೆ ಉತ್ತಮ ಆರಂಭ ಕಂಡಿದ್ದ ಭದ್ರಾವತಿ ಮಧ್ಯಾಹ್ನ ಹೊತ್ತಿಗೆ ಓಟಿಂಗ್ ಪ್ರಮಾಣದಲ್ಲಿ ಇಳಿಕೆಯಾಗಿದೆ.

Polling Chart
ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ಪ್ರಮಾಣ

READ  | ತೀರ್ಥಹಳ್ಳಿಯಲ್ಲಿ ಮತಯಂತ್ರ ಸಮಸ್ಯೆ, ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತ

ಬೆಳಗ್ಗೆ ಇದ್ದ ಜೋಶ್ ಕಡಿಮೆ’
ಭದ್ರಾವತಿ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಶೇ.9.4ರಷ್ಟು ಮತದಾನವಾಗಿತ್ತು. ಆ ವೇಳೆಗೆ ಸೊರಬದಲ್ಲಿ ಅತಿ ಕಡಿಮೆ ಶೇ.5.5ರಷ್ಟು ಮತಗಳು ಚಲಾವಣೆಯಾಗಿದ್ದವು. ಆದರೆ, ಸೊರಬ ಮಧ್ಯಾಹ್ನ ಹೊತ್ತಿಗೆ ಮತದಾನ ಪ್ರಮಾಣದಲ್ಲಿ ವೇಗ ಕಂಡಿದೆ.
ಒಂದೇ ಲಯದಲ್ಲಿ ತೀರ್ಥಹಳ್ಳಿ
ತೀರ್ಥಹಳ್ಳಿ ಕ್ಷೇತ್ರ ಆರಂಭದಿಂದಲೂ ಉತ್ತಮ ಲಯ ಕಾಪಾಡಿಕೊಂಡಿದೆ. ಮಧ್ಯಾಹ್ನ 1 ಗಂಟೆಗೆ ಶೇ.44.00ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿರುವ ಮತದಾರರ ಸಂಖ್ಯೆ
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 7,28,886 ಪುರುಷ, 7,43,713 ಮಹಿಳಾ, 32 ಇತರೆ ಹಾಗೂ 696 ಸೇವಾ ಮತದಾರರು ಸೇರಿ ಒಟ್ಟು 14,73,327 ಮತದಾರರಿದ್ದಾರೆ.
ಮತಗಟ್ಟೆ ಮತ್ತು ಅಧಿಕಾರಿಗಳ ನೇಮಕ
ಜಿಲ್ಲಾ ವ್ಯಾಪ್ತಿಯಲ್ಲಿ 1775+7 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಮತದಾನಕ್ಕೆ ಸಂಬಂಧಿದಂತೆ 2050 ಪಿಆರ್.ಓ, 2050 ಎಪಿಆರ್.ಓ, 4100 ಪಿಓ ಸೇರಿದಂತೆ ಒಟ್ಟು 8200 ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾಗೂ 83 ಮೈಕ್ರೋ ಅಬ್ಸರ್ವರ್’ಗಳನ್ನು ನೇಮಕ ಮಾಡಲಾಗಿದೆ.
ಎಷ್ಟು ಬಸ್’ಗಳ ನಿಯೋಜನೆ
ಒಟ್ಟು 8156 ಸಿಬ್ಬಂದಿ ಮತಗಟ್ಟೆಗಳಿಗೆ ಕರೆದೊಯ್ಯಲು ಬಸ್’ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ 16 ಬಸ್, ಭದ್ರಾವತಿಗೆ 40, ಶಿವಮೊಗ್ಗ ನಗರಕ್ಕೆ 15, ತೀರ್ಥಹಳ್ಳಿಗೆ 45, ಶಿಕಾರಿಪುರಕ್ಕೆ 43, ಸೊರಬಕ್ಕೆ 36, ಸಾಗರಕ್ಕೆ 31 ಮತ್ತು ಹೊಸನಗರಕ್ಕೆ 14 ಸೇರಿದಂತೆ ಒಟ್ಟು 240 ಬಸ್’ಗಳನ್ನು ನಿಯೋಜಿಸಲಾಗಿದೆ.

BS Yediyurappa | ಬಿ.ಎಸ್.ಯಡಿಯೂರಪ್ಪ ಕುಟುಂಬದೊಂದಿಗೆ ಮತದಾನ, ಇಲ್ಲಿಯವರೆಗೆ ಮತದಾನ ಮಾಡಿದ ಗಣ್ಯರ‌್ಯಾರು?

error: Content is protected !!