SN Channabasappa | ಎಸ್.ಎನ್.ಚನ್ನಬಸಪ್ಪ ಬಗ್ಗೆ ತಿಳಿದುಕೊಳ್ಳಲೇಬೇಕಾದ ನಾಲ್ಕು ಅಂಶಗಳಿವು

SN Channabasappa win

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
000: ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದಿಂದ ವಿಜೇತರಾದ ಬಿಜೆಪಿಯ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ (ಚನ್ನಿ) ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು.
ಜನರಿಂದ ಪ್ರೀತಿಯಿಂದ ಚನ್ನಿ ಎಂದು ಕರೆಸಿಕೊಳ್ಳುವ ಇವರು ಪ್ರಖರ ಹಿಂದುತ್ವವಾದಿ. ಇದುವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಿದ್ದು, ವಿಧಾನಸಭೆಗೆ ಪ್ರವೇಶಿಸಿದ್ದಾರೆ.

  1. ಇವರು ಮೊದಲು ಎದುರಿಸಿದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋತಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಜಯಭೇರಿ ಬಾರಿಸಿದ್ದಾರೆ.
  2. 1975ರ ತುರ್ತು ಪರಿಸ್ಥಿತಿಯಲ್ಲಿ 12 ವರ್ಷದವರಾಗಿದ್ದ ಚನ್ನಿ ರಹಸ್ಯವಾಗಿ ಮಧ್ಯರಾತ್ರಿಯಲ್ಲಿ ಪತ್ರಿಕೆಗಳನ್ನು ಹಾಕುತಿದ್ದರು. ಪೊಲೀಸರು ಹಿಡಿದು ವಿಚಾರಿಸಿದಾಗ ಸೆಕೆಂಡ್ ಶೋ ಫಿಲಂಗೆ ಹೋಗಿದ್ದೆ ಎಂದು ಹೇಳಿ ತಪ್ಪಿಸಿಕೊಂಡಿಸಿದ್ದರು.
  3. ಅದಮ್ಯ, ಶ್ರೀಗಂಧ, ಕೋಟೆ ಯುವಕರ ಸಂಘ, ನಿನಾದ, ರಂಗ ಪ್ರಯೋಗ, ಅಭಿನಯ ಹೀಗೆ ಚನ್ನಿಯವರದ್ದು ಬಹುಮುಖ ಪ್ರತಿಭೆ. ಕಲೆ, ಸಂಸ್ಕೃತಿಯಲ್ಲೂ ವಿಶೇಷ ಪ್ರೀತಿ ಇದೆ.
  4. 1989ರಲ್ಲಿ ರಾಜಕೀಯ ಪ್ರವೇಶಿಸಿದ ಇವರು ಮೊದಲ ಸಲ ಜಯ ಕಂಡಿದ್ದು 1992ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ. ಏಳು ಚುನಾವಣೆಗಳನ್ನು ಎದುರಿಸಿ ನಾಲ್ಕು ಸಲ ವಿಜೇತರಾಗಿದ್ದಾರೆ.

‘ಪ್ರಕಾಶ್’ ಟ್ರಾವೆಲ್ಸ್ ಮಾಲೀಕರ ರೋಚಕ ಬದುಕು, ಪ್ರತಿ ನವೋದ್ಯಮಿಗೂ ಮಾದರಿ, ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಂಶಗಳಿವು

error: Content is protected !!