ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಮೂವರು ಅಪರಿಚಿತ ವ್ಯಕ್ತಿಗಳು ಅಸ್ವಸ್ಥ ಸ್ಥಿತಿಯಲ್ಲಿ ದೊರಕಿದ್ದು, ಅವರುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಕೆಳಕಂಡ ಅಪರಿಚಿತ ಶವಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಈ ವ್ಯಕ್ತಿಗಳ ಹೆಸರು, ವಿಳಾಸ ಹಾಗೂ ವಾರಸ್ಸುದಾರರ ಮಾಹಿತಿ ದೊರಕಿರುವುದಿಲ್ಲ.
READ | ಭೀಕರ ಅಪಘಾತದಲ್ಲಿ ಲಾರಿ ಚಕ್ರ ಸಿಲುಕಿ ಮೂವರ ದುರ್ಮರಣ
ಮೃತರು ಗುರುತು ಪತ್ತೆಗೆ ಮನವಿ
- ಕುಂಬಾರಗುಂಡಿ ಮಂಜುನಾಥ ಟಾಕೀಸ್ ಪುಟ್ಪಾತ್ನಲ್ಲಿ ಬಿದ್ದಿದ್ದ ಸುಮಾರು 35-40 ವರ್ಷ ವ್ಯಕ್ತಿ, 5.10 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು ಹೊಂದಿದ್ದು, ಮೈಮೇಲೆ ಬಿಳಿ ನೀಲಿ ಮಿಶ್ರಿತ ಟೀಶರ್ಟ್, ಕಡು ನೀಲಿ ಬಣ್ಣದ ಜರ್ಕಿನ್ ಹಾಗೂ ಕಪ್ಪು ನೈಟ್ ಪ್ಯಾಂಟ್ ಧರಿಸಿರುತ್ತಾನೆ.
- ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ 40-45 ವರ್ಷದ ವ್ಯಕ್ತಿ 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮೈಮೇಲೆ ನೀಲಿ ಬಣ್ಣದ ಕಪ್ಪು ಗೆರೆಗಳಿರುವ ಟೀಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಬಲಕೆನ್ನೆಯ ಮೇಲೆ ರಾಗಿ ಕಾಳೂ ಗಾತ್ರದ ಕಪ್ಪು ಮಚ್ಚೆ ಇರುತ್ತದೆ.
- ಖಾಸಗಿ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಬಿದ್ದಿದ್ದ ಸುಮಾರು 60-65 ವರ್ಷದ ಹೆಂಗಸ್ಸಿನ ಎತ್ತರ 5.10 ಅಡಿ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ಬಿಳಿ ಗುಲಾಬಿ ಮಿಶ್ರಿಣ ಹೂವಿನ ಚಿತ್ರವಿರುವ ನೈಟಿ ಧರಿಸಿರುತ್ತಾರೆ. ಮೃತಳ ಎಡಗೈ ಮತ್ತು ಬಲಗೈನ ಮುಂಗೈನ ಒಳಭಾಗದಲ್ಲಿ ಹೂವಿನ ಚಿತ್ರದ ಹಚ್ಚೆ ಗುರುತು ಇರುತ್ತದೆ.
ಈ ಮೂವರು ಅಪರಿಚಿತ ಮೃತರ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ.: 08182-261414/ 9611761255 ಗಳನ್ನು ಸಂಪರ್ಕೀಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.