Shakti scheme | ಮಹಿಳೆಯರಿಗೆ ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ, ನಾಳೆಯಿಂದ ಪಾಸ್ ಲಭ್ಯ, ಎಲ್ಲೆಲ್ಲಿ ವಿತರಣೆ

ksrtc

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ಸರ್ಕಾರ ಮಹಿಳೆಯರಿಗೆ ‘ಶಕ್ತಿ ಯೋಜನೆ’ (shakti scheme for women) ಅಡಿಯಲ್ಲಿ ರಾಜ್ಯಾದ್ಯಂತ ಪ್ರಯಾಣಿಸಲು ಅವಕಾಶ ನೀಡಿದ್ದು, ಜೂ.11ರಿಂದ ಯೋಜನೆ ಜಾರಿಗೆ ಬರಲಿದೆ.
ನಗರ ಸಾರಿಗೆ, ಸಾಮಾನ್ಯ ಸಾರಿಗೆ ಮತ್ತು ವೇಗದೂತ ಸರ್ಕಾರಿ ಬಸ್’ಗಳಲ್ಲಿ (ಅಂತರರಾಜ್ಯ ಸಾರಿಗೆ ಹಾಗೂ ಪ್ರತಿಷ್ಠಿತ ಸಾರಿಗೆ ಹೊರತುಪಡಿಸಿ) ಉಚಿತ ಪ್ರಯಾಣ ಮಾಡಲು ಭಾನುವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಚಾಲನೆ ನೀಡುವರು.

READ | ನಾಳೆ ಮಂಡಿನೋವಿನ ಪಟ್ಟಿ ಚಿಕಿತ್ಸೆ ಶಿಬಿರ, ಬರಲಿದ್ದಾರೆ ಕೇಂದ್ರ ಪ್ರಶಸ್ತಿ ಪುರಸ್ಕೃತ ತಜ್ಞ ವೈದ್ಯರು

ಶಿವಮೊಗ್ಗದಲ್ಲೂ ನಡೆಯಲಿದೆ ಕಾರ್ಯಕ್ರಮ
ಬೆಂಗಳೂರಿನ ಕಾರ್ಯಕ್ರಮ ನಡೆಯುವ ವೇಳೆಯಲ್ಲಿಯೇ ಎಲ್ಲ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ ಜೂ.11ರಂದು ಬೆಳಗ್ಗೆ 12.30ಕ್ಕೆ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಬಸ್’ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಚೀಟಿ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಕಾರ್ಯಕ್ರಮ ನಡೆಯಲಿದೆ?
ಶಿವಮೊಗ್ಗ ಬಸ್ ನಿಲ್ದಾಣ, ಭದ್ರಾವತಿ ಬಸ್ ನಿಲ್ದಾಣ, ತೀರ್ಥಹಳ್ಳಿ ಖಾಸಗಿ ಬಸ್ ನಿಲ್ದಾಣ, ಸಾಗರ ಬಸ್ ನಿಲ್ದಾಣ, ಸೊರಬ ಬಸ್ ನಿಲ್ದಾಣ, ಶಿಕಾರಿಪುರ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ಜರುಗಲಿದೆ.

Arecanut rate | ಮತ್ತೆ ಏರುಗತಿಯಲ್ಲಿ ಸಾಗಿದ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

error: Content is protected !!