ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ 2023-24 ನೇ ಸಾಲಿಗೆ ವಿವಿಧ ಯೋಜನೆಗಳಿಗೆ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಂತ್ರಚಾಲಿತ ದ್ವಿಚಕ್ರವಾಹನ, ಟಾಕಿಂಗ್ ಲ್ಯಾಪ್ ಟಾಪ್, ಹೊಲಿಗೆ ಯಂತ್ರ, ಬ್ರೈಲ್ ಕಿಟ್, ವಿವಾಹ ಪ್ರೋತ್ಸಾಹ ಧನ, ಶುಲ್ಕ ಮರುಪಾವತಿ, ಆಧಾರ ಯೋಜನೆ, ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು.
READ | ಉಚಿತ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ, ಯಾವ್ಯಾವ ತರಬೇತಿಗಳು ಲಭ್ಯ?
ಈ ಯೋಜನೆಗಳಿಗೆ ಆಫ್ ಲೈನ್ ಮೂಲಕ ಅರ್ಜಿಯನ್ನು ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂಗಳಿಂದ ಪಡೆದು ಭರ್ತಿ ಮಾಡಿ ಎಲ್ಲ ದಾಖಲಾತಿಗಳನ್ನು ಲಗತ್ತಿಸಿ ದ್ವಿಪ್ರತಿಯಲ್ಲಿ ಆಯಾ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಜುಲೈ 17ರೊಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಆಯಾ ತಾಲ್ಲೂಕಿನ ಎಂ.ಆರ್.ಡಬ್ಲ್ಯೂಗಳ ದೂರವಾಣಿ ಸಂಖ್ಯೆ : ಶಿವಮೊಗ್ಗ-9980150110, ಭದ್ರಾವತಿ-7899137243, ಶಿಕಾರಿಪುರ-9741161346, ತೀರ್ಥಹಳ್ಳಿ-9480767638, ಸಾಗರ-9535247757, ಸೊರಬ-9110493122, ಹೊಸನಗರ-9731922693 ಹಾಗೂ ಕಚೇರಿ ದೂರವಾಣಿ ಸಂಖ್ಯೆ ಮತ್ತು ವಿಳಾಸಕ್ಕೆ ಸಂಪರ್ಕಿಸುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Court News | ಚೆಕ್’ಗೆ ನಕಲಿ ಸಹಿ ಹಾಕಿ ಲಕ್ಷಾಂತರ ಹಣ ದುರುಪಯೋಗ, ವ್ಯಕ್ತಿಗೆ ಜೈಲು ಶಿಕ್ಷೆ