ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಆಯನೂರಿನಲ್ಲಿರುವ ಬಾರ್’ನಲ್ಲಿ ಕ್ಯಾಶಿಯರ್ ಒಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಸಚಿನ್ (27) ಮೃತ ವ್ಯಕ್ತಿ. ಕ್ಷುಲ್ಲಕ ಕಾರಣಕ್ಕೆ ಚಾಕುದಿಂದ ಚುಚ್ಚಿದ್ದು ತೀವ್ರ ಗಾಯಗೊಂಡ ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.
READ | ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಮಹಿಳಾ ಐಪಿಎಸ್ ಅಧಿಕಾರಿದಿಢೀರ್ ಭೇಟಿ
ಕೊಲೆಗೇನು ಕಾರಣ?
ತಡರಾತ್ರಿಯಾಗಿದ್ದು, ಬಾರ್ ಬಂದ್ ಮಾಡುವ ಸಮಯವಾದರೂ ಆಯನೂರು ತಾಂಡಾದ ಮೂವರು ಯುವಕರು ಮದ್ಯಪಾನ ಮಾಡುತ್ತಲೇ ಇದ್ದರು. ಬಾರ್ ಸಿಬ್ಬಂದಿ ಸಮಯವಾಯಿತು ಎಂದು ತಿಳಿಸಿದ್ದಾರೆ. ಆದರೆ, ತಾವಿನ್ನೂ ಮದ್ಯ ಸೇವಿಸಬೇಕೆಂದು ಪ್ರತಿಕ್ರಿಯಿಸಿದ್ದಾರೆ. ಸಹಾಯಕ ಕ್ಯಾಶಿಯರ್ ಬಂದು ತಿಳಿಸಿದರೂ ಯುವಕರು ಕೇಳಲಿಲ್ಲ. ತಕ್ಷಣ ಆತ ಫೋನ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಬಂದಿದ್ದೇ ಕ್ಯಾಶಿಯರ್ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವೇಳೆ ಯುವಕರಲ್ಲಿ ಒಬ್ಬ ಬೀಯರ್ ಬಾಟಲಿಯಿಂದ ಸಹಾಯಕ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿದ್ದಾನೆ. ಅವನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೇ ವೇಳೆ ಮತ್ತೊಬ್ಬ ಯುವಕ ಚಾಕುದಿಂದ ಕ್ಯಾಶಿಯರ್’ಗೆ ಏಕಾಏಕಿ ಚುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
Government Schools | ಮಲೆನಾಡಿನ 136 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ! ಶಿಕ್ಷಣ ಸಚಿವರು ನೀಡಿದ ಸೂಚನೆ ಏನು?