Sand seized | 14 ದಾಳಿ, ಮರಳು‌ ತುಂಬಿದ 14 ವಾಹನಗಳು ಸೀಜ್

Lorry

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ 14 ಕಡೆಗಳಲ್ಲಿ ದಾಳಿ ನಡೆಸುತ್ತಿದ್ದು, 14 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಭೂಮರಡ್ಡಿ, ತೀರ್ಥಹಳ್ಳಿ ಡಿವೈಎಸ್.ಪಿ ಗಜಾನನ ವಾಮನ ಸುತರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 

READ | ಮಲೆನಾಡಿನ 136 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ! ಶಿಕ್ಷಣ ಸಚಿವರು ನೀಡಿದ ಸೂಚನೆ ಏನು?

ಎಲ್ಲೆಲ್ಲಿ ಎಷ್ಟು ವಾಹನ ಸೀಜ್?

  • ಹೊಸನಗರ ವೃತ್ತದ ಪಿಐ ಗಿರೀಶ್, ಪಿಎಸ್ಐ ನೀಲಪ್ಪ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಹೊಸನಗರ ಠಾಣಾ ವ್ಯಾಪ್ತಿಯ 4 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
  • ಮಾಳೂರು ವೃತ್ತದ ಪಿಐ ಪ್ರವೀಣ್ ನೀಲಮ್ಮನವರ್, ಪಿಎಸ್ಐ ನವೀನ್ ಮಠಪತಿ ನೇತೃತ್ವದ ತಂಡ ಮಾಳೂರು ಠಾಣಾ ವ್ಯಾಪ್ತಿಯ 4 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
  • ಆಗುಂಬೆ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡವು ಆಗುಂಬೆ ಠಾಣಾ ವ್ಯಾಪ್ತಿಯ 2 ಕಡೆಗಳಲ್ಲಿ ದಾಳಿ ಮಾಡಿದೆ.
  • ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸಾಗರ್ ಅತ್ತರ್ ವಾಲ ನೇತೃತ್ವದ ತಂಡವು ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ 4 ಕಡೆಗಳಲ್ಲಿ ಸೇರಿ ತೀರ್ಥಹಳ್ಳಿ ಉಪ ವಿಭಾಗದಲ್ಲಿ ಒಟ್ಟು 14 ಕಡೆಗಳಲ್ಲಿ ಅಕ್ರಮ ಮರಳು ಸಂಗ್ರಹಣೆ ಮತ್ತು ಸಾಗಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ ಮರಳು ತುಂಬಿದ 14 ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.

Rashtriya Raksha University | ಶಿವಮೊಗ್ಗದಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆರಂಭ, ಯಾವೆಲ್ಲ ಕೋರ್ಸ್’ಗಳು ಲಭ್ಯ? ಪೂರ್ಣ ಮಾಹಿತಿ ಇಲ್ಲಿದೆ

error: Content is protected !!