One click many news | ಸುಸ್ತಾಗಿ ಬಿದ್ದಿದ್ದ ಮಹಿಳೆ ಸಾವು, ಜಿಮ್ ಸ್ಥಾಪನೆಗೆ ಸಹಾಯ ಧನ, ಇನ್ನಷ್ಟು ಸುದ್ದಿ

one click many news 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾನಗರ ರಸ್ತೆಯಲ್ಲಿ ಸುಸ್ತಾದಂತೆ ಬಿದ್ದಿದ್ದ ಸುಮಾರು 70 – 75 ವರ್ಷದ ಅಪರಿಚಿತ ಅನಾಮದೇಯ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ.14 ರಂದು ಮೃತಪಟ್ಟಿರುತ್ತಾರೆ.
ಮೃತ ಮಹಿಳೆಯು ಸುಮಾರು 5.7 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಕಪ್ಪು ಬಣ್ಣದ 08 ಇಂಚು ಕೂದಲು ಇದೆ.
ಈ ಅಪರಿಚಿತ ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ: 08182-261414/9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

READ | ಡೆಂಘೆ ಪ್ರಕರಣ ಹೆಚ್ಚಳ, ಮನೆಯಲ್ಲಿ ಸೊಳ್ಳೆಗಳ‌ ನಿಯಂತ್ರಣ ಹೇಗೆ? ಇಲ್ಲಿವೆ ಟಿಪ್ಸ್

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

SHIMOGA: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2023-24ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಸೌಲಭ್ಯದಡಿ ಜಿಮ್ ಸ್ಥಾಪನೆಗಾಗಿ ಸಹಾಯಧನ ಪಡೆಯಲು ಅಂತರಾಷ್ಟೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಕ್ರೀಡಾಪಟುಗಳು ಅರ್ಜಿ ಮತ್ತು ಮಾರ್ಗಸೂಚಿಗಳನ್ನು ನೆಹರೂ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸೆ.5 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-223328 ನ್ನು ಸಂಪರ್ಕಿಸುವುದು.

ಭದ್ರಾ ಜಲಾಶಯಕ್ಕೆ ಮೀನುಮರಿ ಬಿತ್ತನೆ

SHIMOGA: ರಾಜ್ಯವಲಯ ಜಲಾಶಯ ಅಭಿವೃದ್ಧಿ ಯೋಜನೆಯಲ್ಲಿ ಭದ್ರಾ ಜಲಾಶಯಕ್ಕೆ ಆ.17 ರಂದು ಮೀನುಗಾರಿಕೆ ಅಪರ ನಿರ್ದೇಶಕ ಡಿ. ತಿಪ್ಪೆಸ್ವಾಮಿ ಹಾಗೂ ಶಿವಮೊಗ್ಗ ವಲಯ ಜಂಟಿ ನಿರ್ದೇಶಕ ಗಿರೀಶ್.ಓ ಇವರ ಉಪಸ್ಥಿತಿಯಲ್ಲಿ ಮೀನುಗಾರರ ಸಮ್ಮುಖದಲ್ಲಿ 7.80 ಲಕ್ಷ ಸಾಮಾನ್ಯ ಗೆಂಡೆ ಬಿತ್ತನೆ ಮೀನುಮರಿಗಳನ್ನು ಜಲಾಶಯಕ್ಕೆ ಬಿತ್ತನೆ/ದಾಸ್ತಾನು ಮಾಡಲಾಯಿತು.

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!