Murder | ಭದ್ರಾವತಿಯಲ್ಲಿ ಮರ್ಡರ್, ಆರೋಪಿ ಅರೆಸ್ಟ್

Murder

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ತಾಲೂಕಿನ ಸಂಕ್ಲಿಪುರದಲ್ಲಿ ಮಹಿಳೆಯ ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಭರಮ ಸಾಗರದ ರೂಪಾ(35) ಎಂಬಾಕೆಯ ಕೊಲೆಯಾಗಿದ್ದು, ಈಕೆಯ ಸ್ನೇಹಿತ ಸಿಂಗಾರಿ (35) ಎಂಬಾತ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈತನನ್ನು ಬಂಧಿಸಲಾಗಿದೆ.

READ | ಏಳೆಂಟು ತಿಂಗಳುಗಳಿಂದ ಭಯದ ವಾತಾವರಣ ಸೃಷ್ಟಿಸಿದ್ದ ಭೂಪ ಅರೆಸ್ಟ್, ಹೇಗೆ ಮಾಡ್ತಿದ್ದ ದರೋಡೆ?

ರೂಪಾ ಸಂಕ್ಲಿಪುರದ ಎಂಪಿಎಂನ ನೀಲಗಿರಿ ತೋಪಿನಲ್ಲಿ‌ ಮರಗಳ ಕಡಿತಲೆ ಕೆಲಸ ಮಾಡುತ್ತಿದ್ದಳು. ಈ ವೇಳೆ ಸಿಂಗಾರಿ ಪರಿಚಯವಾಗಿದ್ದಾನೆ.
ಸಿಂಗಾರಿ ಮತ್ತು ರೂಪಾ ನಡುವೆ ಭಾನುವಾರ ರಾತ್ರಿ ಜಗಳವಾಗಿದೆ‌. ಆಗ ರೂಪಾಳ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೊಲೆ ಆರೋಪದ ಹಿನ್ನೆಲೆಯಲ್ಲಿ ಆರೋಪಿ ಸಿಂಗಾರಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟಿದ್ದ ರೂಪಾಳ‌ ಪತಿ
ರೂಪಾಳ ಪತಿಯು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದ‌. ಆಗ ಆಕೆ ಭದ್ರಾವತಿಗೆ ಬಂದಿದ್ದಳು. ಇಲ್ಲಿಯೇ ಮರ ಕಡಿಯುವ ಕೆಲಸ ಮಾಡುತ್ತಿದ್ದಳು. 

error: Content is protected !!