Serial robbery | ರಾತ್ರೋರಾತ್ರಿ ಸರಣಿ ಕಳವು ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್, ಎಲ್ಲೆಲ್ಲಿ‌‌ ಕನ್ನ?

Bhadravathi new town

 

 

ಸುದ್ದಿ‌ ಕಣಜ.ಕಾಂ ಭದ್ರಾವತಿ
BHADRAVATHI: ಭದ್ರಾವತಿಯ ವಿವಿಧೆಡೆ ರಾತ್ರಿ ವೇಳೆ‌ ಸರಣಿ ಕಳವು (Serial robbery) ಮಾಡಿದ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ.
ಭದ್ರಾವತಿಯ ಜೇಡಿಕಟ್ಟೆ ನಿವಾಸಿ ಪ್ರಜ್ವಲ್(20) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿತನಿಂದ ಮೇಲ್ಕಂಡ 4 ಕಳವು ಪ್ರಕರಣಗಳಿಗೆ ಸಂಬಂಧಿಸಿದ ₹34,400 ನಗದು ಮತ್ತು ಅಂದಾಜು ಮೌಲ್ಯ ₹18,665 ರೂಗಳ ತಂಬಾಕು ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ₹60,000 ರೂಗಳ ದ್ವಿಚಕ್ರ ವಾಹನ ಸೇರಿದಂತೆ ₹1,13,065 ರೂಗಳ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Crime logo

READ | ಆರ್.ಪಿ.ಎಫ್ ಭರ್ಜರಿ ಕಾರ್ಯಾಚರಣೆ, ಓಎಚ್.ಓ ತಾಮ್ರ ಕಳ್ಳತನ ಮಾಡಿದ ಆರೋಪಿಗಳು ಅರೆಸ್ಟ್,

ಎಲ್ಲೆಲ್ಲಿ ಕನ್ನ?
ಸೆ.10ರಂದು ರಾತ್ರಿ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಜೆಡಿಕಟ್ಟೆಯ ಎರಡು ಹೋಟೆಲ್ ಗಳು, ರಾಜಪ್ಪ ಲೇಔಟ್ ನಲ್ಲಿರವ ನಂದಿನಿ ಮಿಲ್ಕ್ ಪಾರ್ಲರ್ ಮತ್ತು ಮಾಚೇನಹಳ್ಳಿಯ ಭವಾನಿ ಸ್ಟೀಲ್ ಇಂಡಸ್ಟ್ರೀಸ್ ನ ಆಫೀಸ್ ಸೇರಿ ಒಟ್ಟು 4 ಕಡೆಗಳಲ್ಲಿ ರಾತ್ರಿ ಸರಣಿ ಕನ್ನ ಕಳವು ಪ್ರಕರಣಗಳು ವರದಿಯಾಗಿದ್ದವು. ಈ ಕುರಿತಂತೆ ಐಪಿಸಿ ಕಲಂ 457, 380 ಅಡಿಯಲ್ಲಿ ಪ್ರತ್ಯೇಕ 4 ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಪ್ರಕರಣ ಬೇಧಿಸಿದ ತಂಡ
ಪ್ರಕರಣದಲ್ಲಿ ಕಳುವಾದ ಸಾಮಗ್ರಿ ಮತ್ತು ಆರೋಪಿತರ ಪತ್ತೆಗಾಗಿ ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಭದ್ರಾವತಿ ಉಪ ವಿಭಾಗದ ಡಿವೈಎಸ್.ಪಿ ಕೆ.ಆರ್.ನಾಗರಾಜ್, ಭದ್ರಾವತಿ ಸಿಪಿಐ ಜೆ.ಕುಮಾರ್ ಮೇಲ್ವಿಚಾರಣೆಯಲ್ಲಿ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ ಪಿಎಸ್ಐಗಳಾದ ಟಿ.ರಮೇಶ್, ಭಾರತಿ ನೇತೃತ್ವದಲ್ಲಿ ಸಿಬ್ಬಂದಿ ರಾಘವೇಂದ್ರ, ಟಿ.ನವೀನ್, ಪ್ರವೀಣ್ ಕುಮಾರ್, ತೀರ್ಥಲಿಂಗಪ್ಪ, ಅಶ್ವಿನಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದೆ.

ಗ್ರಾಮಸ್ಥರ ಮೇಲೆ ಕರಡಿ ದಾಳಿ

SHIMOGA: ತಾಲೂಕಿನ‌ ಮಲ್ಲಾಪುರ ಗ್ರಾಮದಲ್ಲಿ ರಾತ್ರಿ ವೇಳೆ ಅಂಗಡಿ ಮುಂದೆ ಕುಳಿತಿದ್ದಾಗ ಕರಡಿ ದಾಳಿ ನಡೆಸಿದೆ. ಅವರು ಕಿರುಚಾಡಿದ್ದರಿಂದ ಕರಡಿ‌ ಅಲ್ಲಿಂದ ಹೋಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ. ಅರಣ್ಯಾಧಿಕಾರಿಗಳ ಗಮನಕ್ಕೆ ಈ ವಿಚಾರ ತಂದರೂ ಪ್ರಯೋಜನವಾಗಿಲ್ಲ. ಲಕ್ಷ್ಮೀಪುರ ಕ್ಯಾಂಪ್ ಹಾಗೂ ಭಗವತಿಕೆರೆ ಗುಡ್ಡಗಳಲ್ಲಿ ಕರಡಿಗಳು‌‌ ಕಾಣಿಸಿಕೊಂಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

Private bus  | ಶಿವಮೊಗ್ಗದಲ್ಲಿ 187 ಖಾಸಗಿ ಬಸ್‍ಗಳು ಸೆರೆಂಡರ್, ಕಾರಣವೇನು? ಏನಿದು ಸೆರೆಂಡರ್?

error: Content is protected !!