Suspend | ಶಿವಮೊಗ್ಗ ತಹಶೀಲ್ದಾರ್ ಅಮಾನತು, ಕಾರಣವೇನು?

Tahasildar Nagaraj

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ‌ ಹೊತ್ತಿರುವ ತಹಶೀಲ್ದಾರ್ ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ.

READ | ಆಯನೂರು ಬಳಿ ಭೀಕರ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ‌ ಸಾವು

ಕಂದಾಯ ಇಲಾಖೆಯು ಈ ಕುರಿತು ಆದೇಶ ಹೊರಡಿಸಿದ್ದು, ನಾಗರಾಜ್ ಅವರು ತಮ್ಮ ಆದಾಯಕ್ಕಿಂತ ಶೇ..138.37ರಷ್ಟು ಅಧಿಕ‌ ಆದಾಯ‌ ಹೊಂದಿರುವುದಾಗಿ ಆರೋಪಿಸಲಾಗಿದೆ.
ಹೊಳಲ್ಕೆರೆಯಲ್ಲಿ‌ ಗ್ರೇಡ್ 2 ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇವರ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ಕುರಿತು ನಾಗರಾಜ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.‌ ಈ‌ ವಿಚಾರವಾಗಿ ಇಲಾಖಾ ವಿಚಾರಣೆ ಬಾಕಿ‌ ಇರಿಸಿ ಅಮಾನತುಗೊಳಿಸಲಾಗಿದೆ.

error: Content is protected !!