Crime news | ಬೀಗರ ಊಟಕ್ಕೆಂದು ಹೊರಟಾಗ ಮನೆ ಪಕ್ಕದವರಿಂದ ಬಂತು ಕರೆ, ಮಾಲೀಕರು ಶಾಕ್

Crime news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಣ್ಣಾನಗರ(Anna nagar)ದ ಮನೆಯೊಂದರಲ್ಲಿ ಕಳ್ಳತನವಾಗಿದ್ದು, ಅಂದಾಜು 4.13 ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣ ಕಳವು ಮಾಡಲಾಗಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮನೆಯ ಬಾಗಿಲು ಮುರಿದು ಬೀರುವಿನಲ್ಲಿದ್ದ ಸುಮಾರು 2.13 ಲಕ್ಷ ರೂ. ಬೆಲೆಬಾಳುವ 61 ಗ್ರಾಂ ತೂಕದ ಬಂಗಾರದ ಆಭರಣ, ಧರ್ಮಸ್ಥಳ ಸಂಘ ಸಾಲದ ಚೀಟಿಯ 2 ಲಕ್ಷ ರೂ. ನಗದು ಸೇರಿದಂತೆ ಒಟ್ಟು 4.13 ಲಕ್ಷ ರೂ. ಮೌಲ್ಯದ ಬಂಗಾರ ಆಭರಣ, ನಗದು ಕಳ್ಳತನ ಮಾಡಲಾಗಿದೆ.

Crime logo

READ | ಅಮೀರ್ ಅಹಮದ್, ಶಿವಪ್ಪ ನಾಯಕ ವೃತ್ತದಲ್ಲಿ ಕೆಲಹೊತ್ತು‌ ಗೊಂದಲದ ಸ್ಥಿತಿ, ಕಾರಣವೇನು, ಎಸ್.ಪಿ ಹೇಳಿದ್ದೇನು?

ಭದ್ರಾವತಿಯಲ್ಲಿ ಮದುವೆ ಮುಗಿಸಿ ಕೆಆರ್.ಎಸ್‍ನಲ್ಲಿ ಬೀಗರ ಊಟ ಇದ್ದುದ್ದರಿಂದ ಸಂಬಂಧಿಕರೆಲ್ಲರೂ ಸೇರಿ ಮೈಸೂರಿಗೆ ಟಿಟಿಯಲ್ಲಿ ತೆರಳುತ್ತಿದ್ದಾಗ ಮನೆಯ ಪಕ್ಕದವರು ಕರೆ ಮಾಡಿ ಬಾಗಿಲಿನ ಬೀಗ ಮುರಿದಿರುವುದಾಗಿ ತಿಳಿಸಿದಿದಾರೆ. ಮಾಹಿತಿ ಲಭ್ಯವಾಗಿದ್ದೇ ಮನೆಗೆ ಸಂಜೆಯ ಹೊತ್ತಿಗೆ ಮರಳಿದ್ದಾರೆ. ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ದೂರು ನೀಡಿದ್ದು, ದೊಡ್ಡಪೇಟೆ ಪೊಲೀಸರು ತನಿಖೆ ನಡೆಸಿದ್ದಾರೆ. 

Photo album | ಹಿಂದೂ ಮಹಾಸಭಾ ಗಣೇಶ ಮೆರವಣಿಗೆಗೆ ಅಲಂಕಾರಗೊಂಡ ಶಿವಮೊಗ್ಗ, ಇಲ್ಲಿದೆ ಫೋಟೊ ಆಲ್ಬಂ

error: Content is protected !!