Ganesh procession | ಗಣಪತಿ ಮೆರವಣಿಗೆ ವೇಳೆ‌ ಗುಂಪುಗಳ ನಡುವೆ ಮಾತಿನ ಚಕಮಕಿ, ಮುಂದೇನಾಯ್ತು?

tank mohalla

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ಗುರುವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ‌ ನಡೆದಿದೆ. ಗಣೇಶ ಮೆರವಣಿಗೆ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದಿದ್ದು, ಮಾಹಿತಿ ಲಭಿಸಿದ್ದೇ ಸ್ಥಳಕ್ಕೆ ಎಸ್.ಪಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಪರಿಸ್ಥಿತಿಗೊಳಿಸಿದ್ದಾರೆ.

READ |  ಶಿವಮೊಗ್ಗದಲ್ಲಿ ಬಂಗಾರಪ್ಪ ಬಸ್ ತಂಗುದಾಣ ತೆರವು, ಸ್ವಯಂ ಪ್ರೇರಿತ ದೂರು ದಾಖಲಿಸಲು ಸೂಚನೆ

ಜಗಳಕ್ಕೇನು ಕಾರಣ?
ಶಿವಮೊಗ್ಗ ನಗರದಲ್ಲಿರುವ ಟ್ಯಾಂಕ್ ಮೊಹಲ್ಲಾದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅದರ ವಿಸರ್ಜನಾ ಪೂರ್ವ ಮೆರವಣಿಗೆಯು ಗುರುವಾರ ರಾತ್ರಿ ನಡೆದಿದೆ. ಆಗ ಮಸೀದಿಯ ಮುಂದೆ ಪೇಪರ್ ಬ್ಲಾಸ್ಟ್ ಬಳಸಬಾರದು ಎಂದು ಆಕ್ಷೇಪಿಸಲಾಗಿದೆ. ಇದೇ ವಿಚಾರವಾಗಿ ಪರಸ್ಪರ ವಾಗ್ವಾದ ಏರ್ಪಟ್ಟಿದೆ.
ಪೇಪರ್ ಬ್ಲಾಸ್ಟ್ ನಿಂದ ಬಣ್ಣ ಬಣ್ಣದ ಕಾಗದದ ಚೂರುಗಳು ಹಾರುತ್ತವೆ. ಅದು ಅಲಂಕಾರಿಕವಾಗಿ ಕಾಣುತ್ತದೆ. ಹೀಗಾಗಿ, ಮೆರವಣಿಗೆಯಲ್ಲಿ ಅದನ್ನು ಬಳಸಲಾಗುತ್ತದೆ‌. ಆದರೆ ಟ್ಯಾಂಕ್ ಮೊಹಲ್ಲಾದ ಮಸೀದಿ ಎದುರುಗಡೆ ಇದನ್ನು ಬಳಸದಂತೆ ಆಕ್ಷೇಪಿಸಿದ್ದ ಪರಿಣಾಮ ಎರಡು ಗುಂಪುಗಳ‌ ನಡುವೆ ಮಾತಿನ‌ ಚಕಮಕಿಯಾಗಿದೆ.
ಬಿಗಿ ಬಂದೋಬಸ್ತ್ ನಡುವೆ ಮೆರವಣಿಗೆ
ಘಟನೆಯ ಸೂಕ್ಷತೆ ಅರಿತ‌ ಪೊಲೀಸ್‌ ಅಧಿಕಾರಿಗಳು ಟ್ಯಾಂಕ್ ಮೊಹಲ್ಲಾಗೆ ಆಗಮಿಸಿದ್ದಾರೆ.‌ ಪರಿಸ್ಥಿತಿಯನ್ನು ತಿಳಿಗೊಳಿಸಿದ‌ ಬಳಿಕ‌ ಮೆರವಣಿಗೆಗೆ ಅವಕಾಸ ನೀಡಲಾಯಿತು. ಈ ವೇಳೆ ಟ್ಯಾಂಕ್‌ ಮೊಹಲ್ಲಾದಲ್ಲಿ‌ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ ಮತ್ತಿತರರು ಆಗಮಿಸಿದ್ದರು.

error: Content is protected !!