
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಅನುಪಿನಕಟ್ಟೆ ರಸ್ತೆಯ ತುಂಗಾ ಮೇಲ್ದಂಡೆ ಚಾನಲ್(Upper tunga canal) ನ ಸೇತುವೆಯ ಹತ್ತಿರ ಸ್ಕೋಡ ಕಾರು ಅನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಸಾಗರದ ರಾಮನಗರ ನಿವಾಸಿ ಅಲ್ತಾಫ್ ಅಲಿಯಾಸ್ ಮಚ್ಚಿ(38), ಶಿವಮೊಗ್ಗದ ಟಿಪ್ಪುನಗರ ನಿವಾಸಿ ಇನಾಯತ್(29) ಎಂಬುವವರನ್ನು ಬಂಧಿಸಲಾಗಿದೆ.
READ | ದುರ್ಘಟನೆ ತಡೆದ ಖಾಕಿ ಪಡೆ, ಡಕಾಯಿತಿಗೆ ಹೊಂಚು ಹಾಕಿದ್ದ ನಾಲ್ವರು ಅರೆಸ್ಟ್, ಮಾರಕಾಸ್ತ್ರಗಳು ಸೀಜ್
ಐದು ಕೆಜಿ ಗಾಂಜಾ, ಕಾರು ಸೀಜ್
ಆರೋಪಿತರಿಂದ ಅಂದಾಜು ₹2.10 ಲಕ್ಷ ಮೌಲ್ಯದ 5 ಕೆ.ಜಿ 250 ಗ್ರಾಂ ತೂಕದ ಒಣ ಗಾಂಜಾ ಅಂದಾಜು ₹2.50 ಲಕ್ಷ ಮೌಲ್ಯದ ಸ್ಕೋಡ ಕಾರು ಮತ್ತು 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿಪಿಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಕಾರ್ಯಾಚರಣೆ
ಖಚಿತ ಮಾಹಿತಿಯ ಮೇರೆಗೆ ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಎ ಉಪ ವಿಭಾಗದ ಡಿವೈಎಸ್.ಪಿ ಬಾಲರಾಜು, ತುಂಗಾನಗರ ಪೊಲೀಸ್ ಠಾಣೆ ಪಿಐ ಬಿ.ಮಂಜುನಾಥ್ ಮೇಲ್ವಿಚಾರಣೆಯಲ್ಲಿ ಪಿಎಸ್ಐ ಶಿವಪ್ರಸಾದ್ ಮತ್ತು ಸಿಬ್ಬಂದಿಯ ತಂಡವು ದಾಳಿ ನಡೆಸಿದೆ.