Area Domination | ಶಿವಮೊಗ್ಗದ ಹಲವೆಡೆ ಪೊಲೀಸರ ಏಕಾಏಕಿ‌ ದಾಳಿ, 33 ಪ್ರಕರಣಗಳು ದಾಖಲು

Shikaripura police

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಹಲವೆಡೆ ಪೊಲೀಸರು ಏಕಾಏಕಿ‌ ಏರಿಯಾ ಡಾಮಿನೇಷನ್ ಮಾಡಿ 33 ಲಘು‌ ಪ್ರಕರಣಗಳನ್ನು ದಾಖಲಿಸಿದ್ದಾರೆ.

READ |  ಕದ್ದ ಆರೋಪಿ ನಾಲ್ಕೇ‌ ಗಂಟೆಯಲ್ಲಿ ಅರೆಸ್ಟ್

ಎಲ್ಲೆಲ್ಲಿ ಏರಿಯಾ‌ ಡಾಮಿನೇಷನ್?
* ‌ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂಕೆಕೆ ರಸ್ತೆ, ಕೆ ಆರ್ ಪುರಂ, ಸಂಗೋಳ್ಳಿರಾಯಣ್ಣ ವೃತ್ತ, ಲಷ್ಕರ್ ಮೊಹಲ್ಲಾ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಜಟ್ ಪಟ್ ನಗರ, ಬೆಂಕಿ ನಗರ, ರಾಗಿಗುಡ್ಡ
* ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಜನ್ನಾಪುರ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿ ವೃತ್ತ, ಕೋಡಿಹಳ್ಳಿ.
* ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ತೇರು ಬೀದಿ, ಅಂಬೇಡ್ಕರ್ ಸರ್ಕಲ್, ಹಳಿಯೂರ್ ಸರ್ಕಲ್, ಆನವಟ್ಟಿ ಟೌನ್ ನ ಆಜಾದ್ ನಗರ, ಶಾದಿಮಹಲ್, ಸೊರಬ ಟೌನ್ ನ ಕೋರ್ಟ್ ವೃತ್ತ. ಸೊರಬ ಬಸ್ ನಿಲ್ದಾಣ,
* ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ವಿನೋಬನಗರ, ಆನಂದಪುರ ಬಸ್ ನಿಲ್ದಾಣ, ಕಾರ್ಗಲ್ ಬಜಾರ್
* ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಬಾಳೆಬೈಲು, ಬಟ್ಟೆ ಮಲ್ಲಪ್ಪ, ನಗರದ ಕೋಟೆ ರಸ್ತೆ, ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು (Foot Patrolling) ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿ ಸಾರ್ವಜನಿಕರಿಗೆ ಕಿರುಕುಳ‌ ನೀಡುತ್ತಿದ್ದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 33 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ.
19 ಜನರ ವಿರುದ್ಧ ಡ್ರಂಕ್‌‌ ಆಂಡ್ ಡ್ರೈವ್
ಇದರೊಂದಿಗೆ ವಾಹನ ತಪಾಸಣೆಯನ್ನು ಸಹ ನಡೆಸಿ ಮಧ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದ ಚಾಲಕರ ವಿರುದ್ಧ ಶಿವಮೊಗ್ಗ ಎ ಉಪ ವಿಭಾಗದಲ್ಲಿ 1 ಪ್ರಕರಣ, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ 9 ಪ್ರಕರಣ,‌ಭದ್ರಾವತಿ ಉಪ ವಿಭಾಗದಲ್ಲಿ 7 ಪ್ರಕರಣ ಮತ್ತು ಶಿಕಾರಿಪುರ ಉಪ ವಿಭಾಗದಲ್ಲಿ 2 ಪ್ರಕರಣಗಳು ಸೇರಿ ಒಟ್ಟು 19 ಮದ್ಯಪಾನ‌ ಸೇವಿಸಿ ವಾಹನ ಚಾಲನೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

error: Content is protected !!