Fire | ಧಗಧಗನೇ ಹೊತ್ತಿ ಉರಿಯುತ್ತಿರುವ ಹುಂಡೈ ಶೋರೂಂ, ಶಂಕರಮಠ ರಸ್ತೆಯೆಲ್ಲ ಹೊಗೆಯೋ ಹೊಗೆ

Showroom shivamogga

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹುಂಡೈ ಶೋರೂಂ ಮೇಲ್ಚಾವಣಿ ಧಗ-ಧಗನೇ ಹೊತ್ತಿ ಉರಿಯುತ್ತಿದ್ದು, ದೂರದಿಂದ ವೀಕ್ಷಿಸುವವರಿಗೂ ಅದರ ದಟ್ಟ ಹೊಗೆ ದೂರದಿಂದಲೇ ಕಾಣಿಸುತ್ತಿದೆ.

READ | ಹೋರಿ ತಿವಿದು ವಿದ್ಯಾರ್ಥಿ ಸಾವು

ಶುಕ್ರವಾರ ರಾತ್ರಿ ಏಕಾಏಕಿ‌ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆವೇ ಹೊತ್ತಿನಲ್ಲಿ ಅದರ ಕೆನ್ನಾಲಿಗೆ ಎಲ್ಲೆಡೆ ವ್ಯಾಪಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಲಾಗಿದೆ. ಸಿಬ್ಬಂದಿ ಅಲ್ಲಿಗೆ ಆಗಮಿಸಿ ಬೆಂಕಿ‌ ನಂದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶೋರೂಂ ಸಿಬ್ಬಂದಿಯೂ ಇದಕ್ಕೆ ಕೈಜೋಡಿಸಿದ್ದಾರೆ.
ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂದು ಖಚಿತ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತೂ ಮಾಹಿತಿ ಕಲೆ ಹಾಕುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ.
ಶೋರೂಂಗೆ ಬೆಂಕಿ ಬಿದ್ದಿರುವ ವಿಚಾರ ತಿಳಿದ ತಕ್ಷಣ ಅಕ್ಕಪಕ್ಕದ ಜನರು ಅಲ್ಲಿಗೆ ದೌಡಾಯಿಸಿದ್ದಾರೆ. ಬೆಂಕಿಯ ರೌದ್ರವನ್ನು ಕಂಡು ಬೆರಗಾಗಿದ್ದಾರೆ. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕಿದೆ.

error: Content is protected !!