Ganja | ಭಾರೀ‌ ಪ್ರಮಾಣದ ಗಾಂಜಾ ನಾಶ, ಕಾರಣವೇನು? ಪೊಲೀಸ್ ಇಲಾಖೆ‌ ಮಹತ್ವದ ಪ್ರಕಟಣೆ

Ganja Burnt at machenahalli

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಸೊಸೈಟಿಯಲ್ಲಿ ₹13,16,400 ಮೌಲ್ಯದ ಒಟ್ಟು 34 ಕೆಜಿ 825 ಗ್ರಾಂ ಮಾದಕ ವಸ್ತು ಗಾಂಜಾವನ್ನು ನಾಶಪಡಿಸಲಾಗಿದೆ.

READ |  ಕಂಪ್ಯೂಟರ್ ಆಪರೇಟರ್’ಗೆ ಚಾಕು ಇರಿತ ಕಾರಣವೇನು?

ಶಿವಮೊಗ್ಗ ಜಿಲ್ಲೆಯಾದ್ಯಂತ ಮಾದಕ ವಸ್ತು ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು 42 ಎನ್.ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ಪ್ರಕರಣಗಳಲ್ಲಿ ವಶಕ್ಕೆ‌ ಪಡೆದ ಗಾಂಜಾವನ್ನು ಶಿವಮೊಗ್ಗ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷ ಜಿ.ಕೆ.ಮಿಥುನ್ ಕುಮಾರ್ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ 2 ಎ.ಜಿ.ಕಾರ್ಯಪ್ಪ, ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಸೊಸೈಟಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಡಾ.ಸಿ.ಎಸ್.ಗಿರೀಶ್, ಡಾ.ಹರೀಶ್ ದೆಲಂತಬೆಟ್ಟು, ಡಿವೈಎಸ್.ಪಿ ಬಾಬು ಆಂಜನಪ್ಪ, ಎಂ.ಸುರೇಶ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಷೇತ್ರ ಸಹಾಯಕ ಬಿ.ಆರ್.ವಿನಾಯಕ್ ಉಪಸ್ಥಿತರಿದ್ದರು.
ಪೊಲೀಸ್ ಪ್ರಕಟಣೆ
ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದುಬಂದಲ್ಲಿ, ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿ ಸಹಕರಿಸಿ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು.

error: Content is protected !!