ಸುದ್ದಿ ಕಣಜ.ಕಾಂ ಶಿವಮೊಗ್ಗ
(Job alerts) SHIVAMOGGA: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್.ಪಿ.ಸಿ.ಡಿ.ಸಿಎಸ್, ಎನ್.ಪಿ.ಹೆಚ್.ಸಿ.ಇ. ಮತ್ತು ಸಿ.ಪಿ.ಎಚ್.ಸಿ-ಯು.ಎಚ್.ಸಿ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.
ಎಂ.ಬಿ.ಬಿ.ಎಸ್. ವೈದ್ಯರು-9, ತಜ್ಞವೈದ್ಯರು (ಎಂ.ಡಿ. ಇಂಟರ್ನಲ್ ಮೆಡಿಸಿನ್)-1 ಮತ್ತು ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಸಂಯೋಜಕರ-1 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಮೆರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
* ಎನ್.ಸಿ.ಡಿ. ಕ್ಲಿನಿಕ್ ಜಿಲ್ಲೆಯ ತಾ.ಅ./ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ಎಂ.ಬಿ.ಬಿ.ಎಸ್. ವೈದ್ಯರ ಹುದ್ದೆಗೆ ವಿದ್ಯಾರ್ಹತೆ ಎಂ.ಬಿ.ಬಿ.ಎಸ್. ಆಗಿದ್ದು, 2 ವರ್ಷ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವಿರಬೇಕು. ಗರಿಷ್ಠ ವಯಸ್ಸು 50 ವರ್ಷ, ಮಾಸಿಕ ಸಂಭಾವನೆ ₹46,894
ಎನ್.ಸಿ.ಡಿ. ಕ್ಲಿನಿಕ್ ಜಿಲ್ಲಾ ಆಸ್ಪತ್ರೆ.
* ಶಿಕಾರಿಪುರದಲ್ಲಿ ಖಾಲಿಯಿರುವ ತಜ್ಞವೈದ್ಯರು (ಎಂ.ಡಿ. ಇಂಟರ್ನಲ್ ಮೆಡಿಸಿನ್) ಹುದ್ದೆಗೆ ಎಂ.ಬಿ.ಬಿ.ಎಸ್.-ಎಂ.ಡಿ. (ಇಂಟರ್ನಲ್ ಮೆಡಿಸಿನ್) ವಿದ್ಯಾರ್ಹತೆ ಹೊಂದಿದ್ದು ಸ್ಪೆಷಲಿಸ್ಟ್ ಹುದ್ದೆಯಲ್ಲಿ 2 ವರ್ಷ ಕಾರ್ಯನಿರ್ವಹಿಸಿದ ಅನುಭವವಿರಬೇಕು. ಗರಿಷ್ಠ ವಯಸ್ಸು 50 ವರ್ಷ, ಮಾಸಿಕ ಸಂಭಾವನೆ ₹46894 (ತಜ್ಞ ವೈದ್ಯರು ಲಭ್ಯವಿಲ್ಲದಿದ್ದಲ್ಲಿ ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು.)
* ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯಲ್ಲಿ ಖಾಲಿಯಿರುವ ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಸಂಯೋಜಕರ ಹುದ್ದೆಗೆ ಬಿ.ಡಿ.ಎಸ್./ ಬಿ.ಎ.ಎಂ.ಎಸ್./ಬಿ.ಯು.ಎಂ.ಎಸ್./ ಬಿ.ಎಚ್.ಎಂ.ಎಸ್./ಬಿ.ಬೈ.ಎನ್.ಎಸ್./ ಎಂ.ಎಸ್.ಸಿ. ನರ್ಸಿಂಗ್/ಎಂ.ಎಸ್.ಸಿ.ಲೈಫ್ ಸೈನ್ಸ್/ಬಿ.ಎಸ್.ಸಿ. ನರ್ಸಿಂಗ್‌ನೊಂದಿಗೆ ಎಂ.ಪಿ.ಎಚ್/ ಎಂ.ಬಿ.ಎ. ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯಸ್ಸು 40 ವರ್ಷ, ಮಾಸಿಕ ಸಂಭಾವನೆ ₹30,000/-.
ಆಸಕ್ತರು ಆ. 8 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 4 ರವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಘಟಕ, ಮೆಗ್ಗಾನ್ ಆಸ್ಪತ್ರೆ ಆವರಣ, ತುಂಗಾ ವಿದ್ಯಾರ್ಥಿನಿಯರ ವಸತಿ ನಿಲಯದ ಎದುರು, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ದಾಖಲೆಗಳ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಭಾಗವಹಿಸುವಂತೆ ಎನ್.ಸಿ.ಡಿ. ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವೈದ್ಯರಿಗೆ ವಿಶೇಷ ಸೂಚನೆ: ಪ್ರತಿ ತಿಂಗಳ 1, 10 ಮತ್ತು 20ನೇ ತಾರೀಕಿನಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ (ರಜೆ ಇರುವ ದಿನವಿದ್ದರೆ ನಂತರದ ದಿನದಲ್ಲಿ) ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220685 ನ್ನು ಸಂಪರ್ಕಿಸುವುದು.
READ | ಗೃಹರಕ್ಷಕ ದಳದಲ್ಲಿ ಖಾಲಿ ಹುದ್ದೆಗಳ ಭರ್ತಿ, ಯಾರನ್ನು ಸಂಪರ್ಕಿಸಬೇಕು?
ಸ್ವಯಂ ಉದ್ಯೋಗಕ್ಕೆ ಸಾಲ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2024-25ನೇ ಸಾಲಿಗೆ ವಿವಿಧ ಸಾಲಗಳನ್ನು ನೀಡುತ್ತಿದೆ.
ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಗಂಗಾಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳನ್ನು ಹೊರತುಪಡಿಸಿ) ಉಳಿದ ಸಮುದಾಯಗಳ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿರಬೇಕು. ಒಂದು ಕುಟುಂಬದ ಒಬ್ಬರಿಗೆ ಮಾತ್ರ ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಲ್ಲ. 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಆಸಕ್ತರು ಸೇವಾಸಿಂಧು ಪೋರ್ಟಲ್ http:/sevasindhu.karnataka.gov.in ಅಥವಾ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರೀಕ ಸೇವಾಕೇಂದ್ರಗಳಲ್ಲಿ ದಾಖಲೆಗಳ ಸಹಿತ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ http://dbcdo.karnataka.gov.in ರಲ್ಲಿ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಭಾಗ್ಯನಿಲಯ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ, ದೂ.ಸಂ.: 08182-229634 ನ್ನು ಸಂಪರ್ಕಿಸುವುದು.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಎಲ್ಲಾ ತಾಲೂಕುಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಸ್ಥಳೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಶಿವಮೊಗ್ಗ- ಕಾರ್ಯಕರ್ತೆಯರು-34, ಸಹಾಯಕಿಯರು-118, ಭದ್ರಾವತಿ -ಕಾರ್ಯಕರ್ತೆಯರು-10, ಸಹಾಯಕಿಯರು-72, ಹೊಸನಗರ -ಕಾರ್ಯಕರ್ತೆಯರು-07, ಸಹಾಯಕಿಯರು-35, ಸಾಗರ- ಕಾರ್ಯಕರ್ತೆಯರು-21, ಸಹಾಯಕಿಯರು-62, ಶಿಕಾರಿಪುರ- ಕಾರ್ಯಕರ್ತೆಯರು-08, ಸಹಾಯಕಿಯರು-55, ಸೊರಬ- ಕಾರ್ಯಕರ್ತೆಯರು-38, ಸಹಾಯಕಿಯರು-65, ತೀರ್ಥಹಳ್ಳಿ- ಕಾರ್ಯಕರ್ತೆಯರು-09, ಸಹಾಯಕಿಯರು-41.
ಆಸಕ್ತರು ಇಲಾಖೆಯ ವೆಬ್‌ಸೈಟ್ https://karnemakaone.kar.nic.in/abcd/ ಮೂಲಕ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆ. 29 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ ಹಾಗೂ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆಯಬಹುದಾಗಿದೆ.
ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕಗಳ ಮಾರಾಟ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2024ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ.50ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು.
ಪುಸ್ತಕಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್‌ಲೈನ್ https://kpp.karnataka.gov.in ನಲ್ಲಿ ಕೂಡ ಈ ಶೇ.50 ರಿಯಾಯಿತಿ ಲಭ್ಯವಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಇದುವರೆಗೆ ಸುಮಾರು 704 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ. ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಪ್ರಾಧಿಕಾರದ್ದಾಗಿದೆ ಎಂದು ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ತಿಳಿಸಿದ್ದಾರೆ.