JOBS IN BHADRAVATHI | ಎಸ್ಸೆಸ್ಸೆಲ್ಸಿ, ಪದವಿ ಪಾಸಾದವರಿಗೆ MRW, VRW ಉದ್ಯೋಗ ಅವಕಾಶ, ಇಂದೇ ಅರ್ಜಿ ಸಲ್ಲಿಸಿ

 

 

ಸುದ್ದಿ‌ ಕಣಜ.ಕಾಂ | TALUK | JOB JUNCTION
ಶಿವಮೊಗ್ಗ: ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಭದ್ರಾವತಿ ತಾಲ್ಲೂಕಿನ 4 ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಗ್ರಾಮೀಣ ಹಾಗೂ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

READ | ಭದ್ರಾವತಿಗೆ ಹೋಗುತ್ತಿದ್ದ ಬೈಕ್ ತಡೆದು ನಿಲ್ಲಿಸಿದಾಗ ಪೊಲೀಸರಿಗೆ ಶಾಕ್, ಬ್ಯಾಗ್‍ನಲ್ಲಿತ್ತು ರಾಶಿ ರಾಶಿ ಮೊಬೈಲ್!

ತಾಲ್ಲೂಕು ಪಂಚಾಯಿತಿಯಲ್ಲಿ ಒಬ್ಬರು ಯಾವುದೇ ಪದವಿ ಹೊಂದಿರುವ ವಿಕಲಚೇತನರನ್ನು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನಾಗಿ (ಎಂ.ಆರ್.ಡಬ್ಲ್ಯು) ಮತ್ತು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10ನೇ ತರಗತಿ ಉತ್ತೀರ್ಣರಾದ ವಿಕಲಚೇತನ ಕಾರ್ಯಕರ್ತರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು(ವಿ.ಆರ್.ಡಬ್ಲ್ಯು) ಆಯ್ಕೆ ಮಾಡಲಗುವುದು.
ಗೌರವ ಧನ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಿ ಅವರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅರ್ಹ ವಿಕಲಚೇತನರಿಗೆ ಪುನರ್ವಸತಿ ಕಾರ್ಯಕ್ರಮಗಳನ್ನು ಕಲ್ಪಿಸುವುದು ಗ್ರಾಮೀಣ ಪುನರ್ವಸತಿ ಕಾರ್ಯಕ್ರಮದ ಉದ್ದೇಶವಾಗಿದೆ.
ಎಲ್ಲೆಲ್ಲಿ ಹುದ್ದೆಗಳು ಖಾಲಿ?
ಭದ್ರಾವತಿ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಎಂ.ಆರ್.ಡಬ್ಲ್ಯು ಹಾಗೂ ಭದ್ರಾವತಿ ತಾಲ್ಲೂಕಿನ ಅರಳಿಕೊಪ್ಪ, ಎರೇಹಳ್ಳಿ, ಹನುಮಂತಾಪುರ, ಸನ್ಯಾಸಿಕೊಡಮಗ್ಗಿ ಗ್ರಾ.ಪಂ ಗಳಲ್ಲಿ ಖಾಲಿ ಇರುವ ವಿ.ಆರ್.ಡಬ್ಲು ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿದೆ.

READ | ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ, 3 ತಿಂಗಳ ಕೌಶಲಾಭಿವೃದ್ಧಿ ತರಬೇತಿ, ಯಾರ‌್ಯಾರು ಅರ್ಜಿ ಸಲ್ಲಿಸಬಹುದು?

ಅರ್ಜಿಗಳನ್ನು ಇಲ್ಲಿಗೆ ಸಲ್ಲಿಸಿ
18 ರಿಂದ 45 ವಯೋಮಿತಿಯೊಳಗಿನ ಗ್ರಾಮ ಪಂಚಾಯಿತಿ/ ಹತ್ತಿರದ ಗ್ರಾಪಂಗಳಲ್ಲಿ ವಾಸವಿರುವ ಅರ್ಹ ವಿಕಲಚೇತನ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭದ್ರಾವತಿ ತಾ.ಪಂ ಕಚೇರಿಯಲ್ಲಿರುವ ದಿನೇಶ್, ಮೊಬೈಲ್ ಸಂಖ್ಯೆ 7899137243 ಇವರಿಂದ ಪಡೆದು ಅರ್ಜಿಯೊಂದಿಗೆ ಎಂ.ಆರ್.ಡಬ್ಲ್ಯು ಹುದ್ದೆಗೆ ಪದವಿ ಅಂಕಪಟ್ಟಿ ಮತ್ತು ವಿ.ಆರ್.ಡಬ್ಲ್ಯು ಹುದ್ದೆಗೆ 10ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಯುಡಿಐಡಿ ಕಾರ್ಡ್ ದಾಖಲೆಗಳೊಂದಿಗೆ 2022ರ ಜನವರಿ 3ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

https://www.suddikanaja.com/2021/09/20/jobs-in-shivamogga-for-sslc-and-commerce-passed-candidates/

error: Content is protected !!