KPSC Recruitment ಪೊಲೀಸ್ ಇಲಾಖೆಯಲ್ಲಿ ‘ಎ’ ವೃಂದದ ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) ವು ಅಧಿಸೂಚನೆಯನ್ನು ಹೊರಡಿಸಿದ್ದು, ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಗಳಲ್ಲಿ ಖಾಲಿ ಇರುವ ಗ್ರೂಪ್ `ಎ’ ವೃಂದದ ವಿವಿಧ ವಿಭಾಗಗಳಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 18ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

READ | ಎಸ್ಸೆಸ್ಸೆಲ್ಸಿನಲ್ಲಿ ಪಾಸಾಗಿದ್ದರೆ ಸಾಕು, ಬಿಎಂಟಿಸಿಯಲ್ಲಿ ಉದ್ಯೋಗ, 300 ಹುದ್ದೆಗಳ ನೇಮಕಾತಿ

ಅರ್ಜಿ ಸಲ್ಲಿಸುವ ದಿನಾಂಕ ಮಾರ್ಚ್ 16ರರಿಂದ ಆರಂಭವಾಗಿದೆ. ಶುಲ್ಕ ಪಾವತಿಸಲು ಏಪ್ರಿಲ್ 19 ಅಂತಿಮ ದಿನವಾಗಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂಪಾಯಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಹಾಗೂ ಎಸ್.ಸಿ, ಎಸ್.ಟಿ., ಪ್ರವರ್ಗ 1 ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿರುತ್ತದೆ.

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ  16-03-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  18-04-2022
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ  19-04-2022

ಅರ್ಜಿ ಸಲ್ಲಿಕೆ ಹೇಗೆ
ಆನ್ ಲೈನ್ ಮೂಲಕವೇ ಅರ್ಜಿಗಳನ್ನು ಭರ್ತಿ ಮಾಡಬೇಕು, ಈ ವೇಳೆ ಭಾವಚಿತ್ರ, ಸಹಿ, ವಯೋಮಿತಿ, ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ಕಾಮನ್ ಸರ್ವಿಸ್ ಸೆಂಟರ್ ಅಥವಾ ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ.
ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ
ವಿಷ ವಿಜ್ಞಾನ, ಜೀವಶಾಸ್ತ್ರ, ಡಿಎನ್.ಎ, ರಾಸಾಯನಿಕ ಮತ್ತು ಪ್ರಶ್ನಿತ ದಸ್ತಾವೇಜು ವಿಭಾಗದಲ್ಲಿ ಅರ್ಜಿಗಳನ್ನು ಸಲ್ಲಿಸು ಅಭ್ಯರ್ಥಿಗಳು ಆಯಾ ವಿಷಯದಲ್ಲಿ ಪದವಿಯನ್ನು ತೇರ್ಗಡೆಯಾಗಿಡಬೇಕು. ಅಂತಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಜೊತೆಗೆ, ಸಂಬಂಧಪಟ್ಟ ವಿಭಾಗದಲ್ಲಿ ಅನುಭವ ಹೊಂದಿರಬೇಕು. ಅದಕ್ಕೆ ಸಂಬಂಧಿಸಿದ ಅನುಭವ ಪತ್ರವನ್ನು ನಿಗದಿಪಡಿಸಿದ ದಿನಾಂಕದೊಳಗೆ ಸಲ್ಲಿಸತಕ್ಕದ್ದು.

READ | ಎಸ್ಸೆಸ್ಸೆಲ್ಸಿ ಪಾಸ್ ಆದವರಿಗೆ ಶಿವಮೊಗ್ಗದ ನ್ಯಾಯಾಲಯದಲ್ಲಿ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

ಹುದ್ದೆ  ಉಳಿಕೆ ಮೂಲ ವೃಂದದ ಹುದ್ದೆ  ಹೈ-ಕ ವೃಂದದ ಹುದ್ದೆ  ಒಟ್ಟು ಹುದ್ದೆ
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸಹಾಯಕ ನಿರ್ದೇಶರು- ವಿಷ ವಿಜ್ಞಾನ ವಿಭಾಗ 2 1 3
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸಹಾಯಕ ನಿರ್ದೇಶರು- ಜೀವಶಾಸ್ತ್ರ ವಿಭಾಗ 2 2
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸಹಾಯಕ ನಿರ್ದೇಶರು- ಡಿಎನ್‌ಎ ವಿಭಾಗ 1 1
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸಹಾಯಕ ನಿರ್ದೇಶರು- ರಸಾಯನಿಕ ವಿಭಾಗ 2 2
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸಹಾಯಕ ನಿರ್ದೇಶರು- ಪ್ರಶ್ನಿತ ದಸ್ತಾವೇಜು ವಿಭಾಗ 2 2
ಒಟ್ಟು 9 1 10

NOTIFICATION

WEBSITE

https://www.suddikanaja.com/2022/02/18/mp-by-raghavendra-said-that-a-sub-regional-science-center-is-being-set-up-on-an-eight-acre-site-at-shimoga-town-expert-committee-visited/

error: Content is protected !!