ಭಾರೀ ಶಬ್ದಕ್ಕೆ ನಲುಗಿದ ಜನ, ಸುಟ್ಟು ಭಸ್ಮವಾದ ಮನೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥಪುರದಲ್ಲಿ ಮಂಗಳವಾರ ಮಧ್ಯಾಹ್ನ ಅಡುಗೆ ಅನಿಲ ಸ್ಫೋಟಗೊಂಡಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಒಳ್ಳೂರಮದಿ ಎಂಬಾತನ ಮನೆಯಲ್ಲಿ ಘಟನೆ ಸಂಭವಿಸಿದ್ದು, ಭಾರಿ ಸ್ಫೋಟದ ಶಬ್ದಕ್ಕೆ ಅಕ್ಕಪಕ್ಕದ ಜನರು ಗಾಬರಿಯಾಗಿ ಓಡಿ ಬಂದಿದ್ದಾರೆ. ಸ್ಫೋಟವಾದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ, ಜೀವಹಾನಿಯಾಗಿಲ್ಲ.

Bhadravathi Fire accident
ಭದ್ರಾವತಿ ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ಸುಟ್ಟು ಭಸ್ಮವಾಗಿರುವ ಮನೆ

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು
ರಂಗನಾಥಪುರ ಗ್ರಾಮದಲ್ಲಿ ಬೆಂಕಿ ಅನಾಹುತ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಭದ್ರಾವತಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ತಕ್ಷಣ ಅವರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಗೆ ಅಡುಗೆ ಅನಿಲ ಸ್ಫೋಟಗೊಂಡಿರುವುದೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

READ | ಜನ್ಮದಿನ ಹಿನ್ನೆಲೆ ಎಲ್ಲೆಡೆ ಪುನೀತ್ ರಾಜಕುಮಾರ್ ಫ್ಲೆಕ್ಸ್, ‘ಸಿನಿ ಜರ್ನಿ’ ನೆನಪು

ಮದುವೆಗೆಂದು ಇಟ್ಟಿದ್ದ ಚಿನ್ನಾಭರಣವೂ ಭಸ್ಮ
ಮಗಳ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳು ಹಾಗೂ ಚಿನ್ನಾಭರಣಗಳು ಸಹ ಸುಟ್ಟು ಭಸ್ಮವಾಗಿವೆ. ಮನೆಯನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಗೂ ಮುನ್ನ ಒಳ್ಳೂರಮದಿ, ಮಗಳು ಕೆಲಸಕ್ಕೆ ಹೋಗಿದ್ದರು. ಆತನ ಮಗ ಕೂಡ ಹೊರಗಡೆ ಹೋಗಿದ್ದ ಎಂದು ತಿಳಿದುಬಂದಿದೆ.

https://www.suddikanaja.com/2021/11/30/continuous-rise-in-lpg-gas-prices-the-last-10-months-of-complete-details-here/

error: Content is protected !!