ಭಾರಿ ಮಳೆ, ಮರ ಬಿದ್ದು ಕುರಿ ಕಾಯುತ್ತಿದ್ದ ಮಹಿಳೆ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸೊರಬ: ತಾಲೂಕಿನ ಮಾವಲಿಯಲ್ಲಿ ಮರವೊಂದು ಮಹಿಳೆಯ ಮೇಲೆ ಬಿದ್ದು ಆಕೆ ಮೃತಪಟ್ಟಿರುವ ಘಟನೆ ನಡೆದಿದೆ.

ಮಾವಲಿ ಗ್ರಾಮದ ನಿವಾಸಿ ಕುರಿ ಕಾಯುವ ಮಲ್ಲಮ್ಮ(52) ಮೃತಳು. ಶುಕ್ರವಾರ ಸಂಜೆ ಏಕಾಏಕಿ ಮಳೆ ಸುರಿಯಲು ಆರಂಭಿಸಿದೆ. ಮಳೆಯಿಂದ ರಕ್ಷಣೆ ಪಡೆಯುವುದಕ್ಕಾಗಿ ಮರದ ಕೆಳಗಡೆ ನಿಂತಿದ್ದು, ಆಗ ಮರ ಆಕೆಯ ಮೇಲೆ ಬಿದ್ದಿದೆ. ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸೊರಬ ತಾಲೂಕಿನಲ್ಲಿ ಮಳೆಯು ಭಾರಿ ಅನಾಹುತವನ್ನೇ ಸೃಷ್ಟಿಸಿದ್ದು, ಮರಗಳು ಬುಡಮೇಲಾಗಿವೆ. ರಸ್ತೆಗಳ ಮೇಲೆ ವಿದ್ಯುತ್ ಕಂಬಗಳು ಉರುಳಿವೆ. ಹಲವೆಡೆ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದೆ.

error: Content is protected !!