ಭದ್ರಾವತಿಯಲ್ಲಿ ನಡೀತು ಅಪಘಾತ, ಬೈಕ್ ಸವಾರ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ರಸ್ತೆ ಮಧ್ಯೆ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಅಶ್ವತ್ಥ್ ನಗರದಲ್ಲಿ ಗುರುವಾರ ನಡೆದಿದೆ.

READ | ಭದ್ರಾವತಿದಲ್ಲಿ ನಡೆಯಲಿದೆ ರಾಜ್ಯಮಟ್ಟದ ಟಿ20 ಕ್ರಿಕೆಟ್ ಟೂರ್ನಿ, ಯಾವ ತಂಡಗಳು ಭಾಗಿ

ನಾಗರಾಜ್ (24) ಎಂಬಾತ ಮೃತ ವ್ಯಕ್ತಿ. ಇವರು ಭದ್ರಾವತಿಯಿಂದ ಶಿವಮೊಗ್ಗದ ತಾಲೂಕಿನ ದೇವರಹಳ್ಳಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರುಗಡೆ ದಿಢೀರ್ ಆಗಿ ನಾಯಿಯೊಂದು ಬಂದಿದೆ. ಆಗ ಘಟನೆ ನಡೆದಿದೆ. ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಭದ್ರಾವತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!