Mobile theft | ಶೋರೂಂನಿಂದಲೇ‌ ಆ್ಯಪಲ್ ಮೊಬೈಲ್ ದೋಚಿ ಎಸ್ಕೆಪ್ ಆಗಿದ್ದ ಯುವಕ‌ ಅರೆಸ್ಟ್

police

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಶೋರೂಂನಿಂದಲೇ ಎರಡು ಆ್ಯಪಲ್ (apple) ಕಂಪನಿಯ ಮೊಬೈಲ್’ಗಳನ್ನು ದೋಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ಸೋಮವಾರ ಬಂಧಿಸಿ, ಆತನ ಬಳಿಯಿಂದ ಮೊಬೈಲ್’ಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ(MC Halli) ನಿವಾಸಿ ನಿತೀಶ್(21) ಬಂಧಿತ ಆರೋಪಿ. ಈತನಿಂದ ₹1,40,000 ಮೌಲ್ಯದ 2 Apple ಕಂಪನಿಯ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

mobile theft apple

READ | ಭದ್ರಾವತಿಯಲ್ಲಿ ಮಳೆಗೆ ಮಹಿಳೆ‌ ಬಲಿ

ಶೋರೂಂನಲ್ಲಿ‌ ಮೊಬೈಲ್‌ ನೋಡುವ ನೆಪದಲ್ಲಿ ದೋಚಿ‌‌ ಎಸ್ಕೆಪ್
ಆಗಸ್ಟ್ 2ರಂದು ಬೆಳಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಮೊಗ್ಗ ಟೌನ್ KSRTC ಬಸ್ ನಿಲ್ದಾಣ ಕಟ್ಟಡದಲ್ಲಿರುವ ರಿಲಾಯನ್ಸ್ ಡಿಜಿಟಲ್ ಶೋರೂಂ(Reliance Digital)ನಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ವ್ಯಾಪಾರ ಮಾಡುವ ನೆಪದಲ್ಲಿ ಬಂದು ಮೊಬೈಲ್ ಪ್ರದರ್ಶನ ಕೌಂಟರ್ ನಲ್ಲಿ ಇರಿಸಿದ್ದ ₹1,40,000 ಮೌಲ್ಯದ 2 Apple ಕಂಪನಿಯ ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ‌ ಕೈಗೊಳ್ಳಲಾಗಿದೆ.‌‌ ದೊಡ್ಡಪೇಟೆ ಪೊಲೀಸ್ ಠಾಣೆ ಪಿಐ ಮತ್ತು ಸಿಬ್ಬಂದಿ ತಂಡವು ಆರೋಪಿಯನ್ನು ಬಂಧಿಸುವಲ್ಲಿ‌ ಸಫಲವಾಗಿದೆ.

https://suddikanaja.com/2021/12/17/various-company-mobile-seized-by-police/

Leave a Reply

Your email address will not be published. Required fields are marked *

error: Content is protected !!