Koti Kantha Gayan | ಮಲೆನಾಡಿನಲ್ಲಿ ಮೊಳಗಿನ ಕೋಟಿ ಕಂಠ ಗಾಯನ, ಶಿವಮೊಗ್ಗದಲ್ಲಿ ಎಷ್ಟು ಜನ ನೋಂದಾಯಿಸಿಕೊಂಡಿದ್ದರು?

Koti kantha kannada

 

 

ಸುದ್ದಿ ಕಣಜ.ಕಾಂ | DISTRICT | 28 OCT 2022
ಶಿವಮೊಗ್ಗ: ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ (Koti Kantha Gayan ) ಕಾರ್ಯಕ್ರಮ ವೇಳೆ ಮಲೆನಾಡಿನ ಹೆಬ್ಬಾಗಿಲು (Gate way of malnad) ಕನ್ನಡಮಯಗೊಂಡಿತ್ತು.

READ | ಹೊಳೆಹೊನ್ನೂರಿನಲ್ಲಿ ಐದು ಕುರಿಗಳನ್ನು ಬಲಿ ಪಡೆದ ಚಿರತೆ 

ನಗರದ ಡಿಸಿ ಕಚೇರಿ ಮುಂದೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ,(Dr.Narayangowda)  ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗಿಯಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ. ಎರಡನೇ ಬಾರಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಕನ್ನಡಿಗರಿಗೆ ಇದೊಂದು ಹೆಮ್ಮೆಯಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಬೇರೆಡೆಗಳಲ್ಲಿ ಸಹ ನಡೆಯುತ್ತಿರುವುದು ಸಂತಸದ ವಿಚಾರವಾಗಿದ್ದು, ಕಾರ್ಯಕ್ರಮ ಆಯೋಜಿಸಿದ ಮುಖ್ಯಮಂತ್ರಿಗಳು ಮತ್ತು ಯಶಸ್ವಿಗೊಳಿಸಿದ ಎಲ್ಲರಿಗೆ ಅಭಿನಂದಿಸುತ್ತೇನೆ ಎಂದರು.

ಕನ್ನಡದ ಬಗೆಗಿನ ನಮ್ಮ ಅಭಿಮಾನ ಇಡೀ ಪ್ರಪಂಚಕ್ಕೆ ಈ ಕಾರ್ಯಕ್ರಮದ ಮೂಲಕ ಗೊತ್ತಾಗಿದೆ. ಕನ್ನಡ ನಮ್ಮ ಮೊದಲ ಆದ್ಯತೆಯಾಗಿದ್ದು, ಕನ್ನಡದ ಹಾಡುಗಳನ್ನು ಸಾಮೂಹಿಕವಾಗಿ ಹೇಳುವ ಮೂಲಕ ಒಂದಾಗಿದ್ದೇವೆ ಎಂಬ ಸಂದೇಶವನ್ನು ನೀಡಿದ್ದೇವೆ. ಈ ಕಾರ್ಯಕ್ರಮದ ಮೂಲಕ ಎಲ್ಲರಲ್ಲಿ ಕನ್ನಡದ ಜಾಗೃತಿ ಮೂಡಿಸಿದ್ದೇವೆ. ಇಂತಹ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ.
| ಕೆ.ಎಸ್.ಈಶ್ವರಪ್ಪ, ಶಾಸಕ

ಕೋಟಿ ಕಂಠಗಳ ನಿನಾದ ಮುಗಿಲೆತ್ತರಕ್ಕೇರುತ್ತಿದೆ. ಎರಡು ಜ್ಞಾನಪೀಠ ಪ್ರಶಸ್ತಿ ಪಡೆದ ಏಕಮಾತ್ರ ಜಿಲ್ಲೆ ನಮ್ಮದಾಗಿದ್ದು, ಇಬ್ಬರು ರಾಷ್ಟ್ರಕವಿಗಳನ್ನು ಹೊಂದಿರುವ, ಎಲ್ಲ ರೀತಿಯ ಪ್ರಾಕೃತಿಕ ಸೊಬಗಿನ ಮತ್ತು ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಹುಟ್ಟಿದ ನಮ್ಮ ಜಿಲ್ಲೆಯ ಸ್ವರ ವಿಶೇಷವಾಗಿದೆ ಎಂದರು.
| ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ

ಆನ್‍ಲೈನ್‍ನಲ್ಲಿ ಒಟ್ಟು 3.33 ಲಕ್ಷ ಜನ ನೋಂದಣಿ
ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಲಾಯಿತು. ಜಿಲ್ಲೆಯಲ್ಲಿ ಕೋಟಿ ಕಂಠ ಗಾಯನಕ್ಕಾಗಿ ಒಟ್ಟು 3.33 ಲಕ್ಷ ಜನರು ಆನ್ ಲೈನ್’ನಲ್ಲಿ ನೋಂದಾಯಿಸಿಕೊಂಡಿದ್ದರು.

READ | ಭದ್ರಾವತಿಯಲ್ಲಿ ದರೋಡೆ ಗ್ಯಾಂಗ್ ಅರೆಸ್ಟ್, ಸಿಬ್ಬಂದಿ ಕಾರ್ಯಕ್ಕೆ ಭೇಷ್ ಎಂದ ಎಸ್ಪಿ

ಕನ್ನಡ ಸಂಕಲ್ಪ ಬೋಧನೆ
ಕಾರ್ಯಕ್ರಮದಲ್ಲಿ ಕನ್ನಡ ಸಂಕಲ್ಪವನ್ನು ಬೋಧಿಸಲಾಯಿತು. ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಅರುಣ್ ಮತ್ತು ತಂಡ ಶಿವಮೊಗ್ಗ ಇವರು ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊ ಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಓ ಎನ್.ಡಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕೋಟಿ ಕಂಠಕ್ಕೆ ಸಾಥ್
ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಜೋಗ ಜಲಪಾತ ಎದುರು, ಜೋಗ, ನರಸಿಂಹಸ್ವಾಮಿ ದೇವಸ್ಥಾನ ಎದುರು, ಭದ್ರಾವತಿ, ಬಿದನೂರು ಕೋಟೆ ಎದುರು, ನಗರ, ಹೊಸನಗರ, ಕುವೆಂಪು ಮನೆ, ಕುಪ್ಪಳಿ, ತೀರ್ಥಹಳ್ಳಿ, ಶಾಹಿ ಗಾರ್ಮೆಂಟ್ಸ್, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ, ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ಸೇರಿದಂತೆ ದೇಶೀಯ ವಿದ್ಯಾಶಾಲೆ, ಪೆಸಿಟ್, ಜವಾಹರಲಾಲ್ ನೆಹರೂ ತಾಂತ್ರಿಕ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಇತರೆ ವಿದ್ಯಾಲಯಗಳಲ್ಲಿಯೂ ಸಹ ಕೋಟಿ ಕಂಠ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

https://suddikanaja.com/2022/10/27/shimoga-police-interduced-mcctns-mobile-crime-and-criminal-tracking-network-system-to-identify-criminals/

Leave a Reply

Your email address will not be published. Required fields are marked *

error: Content is protected !!