Firing | ಹೊಸ ವರ್ಷದ ಪಾರ್ಟಿ ವೇಳೆ ಹಾರಿದ ಗುಂಡು, ಫೈರಿಂಗ್ ಮಾಡಿದ ವ್ಯಕ್ತಿಯೇ ಸಾವು

gun Firing

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿದ್ಯಾನಗರದ ಮನೆಯೊಂದರಲ್ಲಿ ಹೊಸ ವರ್ಷ ಪಾರ್ಟಿ ವೇಳೆ ಮಿಸ್ ಫೈರಿಂಗ್ ಆಗಿ ಯುವಕನಿಗೆ ತಗುಲಿದ್ದು, ಗುಂಡು ಹಾರಿಸಿದ ವ್ಯಕ್ತಿಯೇ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.

READ | ಇನ್ಮುಂದೆ ಕೈ ಮಾಡಿದೆಲ್ಲಲ್ಲ‌ ಸಿಟಿ ಬಸ್‌ ನಿಲ್ಲಲ್ಲ, ಶಿವಮೊಗ್ಗ ನಗರದಲ್ಲಿ 117 ಬಸ್ ನಿಲ್ದಾಣಗಳಿಗೆ ಅಧಿಸೂಚನೆ, ಎಲ್ಲೆಲ್ಲಿ‌?

ವಿದ್ಯಾನಗರ ನಿವಾಸಿ ಮಂಜುನಾಥ್ ಓಲೇಕರ್(67) ಎಂಬುವವರು ಮೃತಪಟ್ಟಿದ್ದಾರೆ. ಪಾರ್ಟಿ ಬಳಿಕ ಲೈಸೆನ್ಸ್ ಹೊಂದಿದ ಗನ್’ನಿಂದ ಗುಂಡು ಹಾರಿದ್ದು, ಮಂಜುನಾಥ್ ಅವರ ಮಗನ ಸ್ನೇಹಿತನಿಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ. ಇದುವರೆಗೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ.
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಜುನಾಥ ಓಲೇಕರ್ ಎಂಬುವವರ ಮನೆಯಲ್ಲಿ ಪಾರ್ಟಿ ನಂತರ ಹೊಸ ವರ್ಷ ಆಚರಣೆ ಮಾಡುವಾಗ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುಂಡು ತಗುಲಿದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

https://suddikanaja.com/2022/12/31/happy-new-year-2023-wishes/

error: Content is protected !!