Illegal slaughterhouse | ಅಕ್ರಮ ಕಸಾಯಿಖಾನೆಯಲ್ಲಿ 7 ಹಸುಗಳ ಬಲಿ, ಕಟ್ಟಡ ಡೆಮಾಲಿಷ್, 10 ಜೀವಂತ ಹಸುಗಳು ಗೋಶಾಲೆಗೆ ಶಿಫ್ಟ್

cattle

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸೂಳೇಬೈಲಿ(sulebailu)ನ ಅಕ್ರಮ ಕಸಾಯಿಖಾನೆಯಲ್ಲಿ ಏಳು ಹಸುಗಳ ಕತ್ತು ಕೊಯ್ದು ಬಲಿ ಪಡೆದ ಘಟನೆ ನಡೆದಿದ್ದು, ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಸುಗಳನ್ನು ವಶಕ್ಕೆ ಪಡೆದಿದ್ದಾರೆ.

READ | ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಇಂದಿನಿಂದ ವೈಭವದ ಜಾತ್ರಾ ಮಹೋತ್ಸವ, ಯಾವ ದಿನ ಏನು ವಿಶೇಷ ಕಾರ್ಯಕ್ರಮ? ಹಿನ್ನೀರಿಗೆ ಬೇಲಿ

ಬೆಳ್ಳಂಬೆಳಗ್ಗೆ ದಾಳಿ, ಕಟ್ಟಡ ಡೆಮಾಲಿಷ್
ಸೂಳೆಬೈಲಿನ ಅಜೀಜ್ ಎಂಬುವವರ ಮನೆ ಹಿಂಭಾಗದ ಶೆಡ್’ನಲ್ಲಿ ಮಾಂಸಕ್ಕಾಗಿ ಗೋವುಗಳ ಹತ್ಯೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಈ ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ಬೆಳ್ಳಂಬೆಳಗ್ಗೆ ತುಂಗಾ ನಗರ ಠಾಣೆ ಸಿಪಿಐ ಮಂಜುನಾಥ್, ಪಿಎಸ್.ಐ ನೇತೃತ್ವದಲ್ಲಿ ಪೆÇಲೀಸರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಆರೋಪಿಗಳು ಪರಾರಿಯಾಗಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಸಾಯಿಖಾನೆಯಲ್ಲಿದ್ದ 10 ಹಸು ರಕ್ಷಣೆ ಮಾಡಲಾಗಿದೆ. ಅವುಗಳನ್ನು ಗೋಶಾಲೆಗೆ ಸ್ಥಳಾಂತರಿಸಲಾಗಿದೆ. ಅಕ್ರಮ ಗೋಶಾಲೆ ನಡೆಸುತ್ತಿದ್ದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

error: Content is protected !!