Protest | ಶಿವಮೊಗ್ಗ- ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿಯಿಟ್ಟು ಆಕ್ರೋಶ

Protest

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಒಳ ಮೀಸಲಾತಿ ವಿರೋಧಿಸಿ ಗಾಡಿಕೊಪ್ಪದಲ್ಲಿ ರಸ್ತೆ ತಡೆ, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಒಳಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿ ಬಂಜಾರ ಸಮುದಾಯದವರು ಬುಧವಾರವೂ ಪ್ರತಿಭಟನೆ ನಡೆಸಿದರು. ಶಿವಮೊಗ್ಗದ ಗಾಡಿಕೊಪ್ಪದ ಬಂಜಾರ ಸಮುದಾಯದವರು ರಸ್ತೆ ತಡೆ ಮೂಲಕ ಧರಣಿ ನಡೆಸಿದರು.

READ | ಜೋರಾಯ್ತು ಒಳ ಮೀಸಲಾತಿ ಕಿಚ್ಚು, ತಾಂಡಾಗಳಲ್ಲಿ ಮತದಾನ ಬಹಿಷ್ಕಾರ‌ ಎಚ್ಚರಿಕೆ, ಎಲ್ಲಿ ಏನಾಯ್ತು?

ಸರ್ಕಾರದ ವಿರುದ್ಧ ಘೋಷಣೆ
ಪ್ರತಿಭಟನಾಕಾರರು ಟೈಯರ್‍ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಿವಮೊಗ್ಗ- ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ರಸ್ತೆ ಮಧ್ಯೆ ಟೈಯರ್‍ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೆ ಬಂಜಾರ ಜನಾಂಗದ ಶಾಸಕರು ಹಾಗೂ ಸಂಸದರ ಅಣುಕು ಶವ ಪ್ರದರ್ಶನವನ್ನು ಮಾಡಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಗಾಡಿಕೊಪ್ಪ ತಾಂಡದ ನಾಯಕ್, ಡಾವ್, ಕಾರ್ ಭಾರಿ ಮತ್ತು ತಾಂಡದ ಗ್ರಾಮಸ್ಥರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.

error: Content is protected !!