Shivamogga airport | ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಖರ್ಚಾದ ಹಣವೆಷ್ಟು? ಶಾಕ್ ಆಗುವುದರಲ್ಲಿ ಅನುಮಾನವೇ ಇಲ್ಲ!

Shivamogga Airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ವಿಮಾನ ನಿಲ್ದಾಣ (shimoga airport) ಉದ್ಘಾಟನೆಗೆ ಖರ್ಚಾದ ಹಣ ಬರೋಬ್ಬರಿ ₹25 ಕೋಟಿ!
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಜನ್ಮದಿನದಂದೇ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಹರಿದುಬಂದಿದ್ದರು. ಭವ್ಯ ಪೆಂಡಾಲನ್ನು ನಿರ್ಮಾಣ ಮಾಡಲಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಈ ಕಾರ್ಯಕ್ರಮ ಆಯೋಜನೆಗೆ ಖರ್ಚಾದ ಹಣ ಕೇಳಿ ಜನರೂ ದಂಗಾಗುತ್ತಿದ್ದಾರೆ.

Shivamogga airport 1

READ | ತಂದೆಯ ಸಾವಾದರೂ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ, ಇದು ಹೃದಯ ಕಲಕುವ ಘಟನೆ

ಯಾವುದಕ್ಕೆಷ್ಟು ಖರ್ಚು?

  • ಸಮಾರಂಭ ಆಯೋಜಿಸಿದ ಭೂಮಿ ಸಮತಟ್ಟಿಗೆ ₹3 ಕೋಟಿ
  • ಪೆಂಡಾಲು ನಿರ್ಮಾಣಕ್ಕೆ ₹5.27 ಕೋಟಿ
  • ಕುಡಿಯುವ ನೀರಿಗೆ ₹1.50 ಕೋಟಿ
  • ಸಾರಿಗೆ ವೆಚ್ಚ ₹4.25 ಕೋಟಿ
  • ಊಟದ ಕೌಂಟರ್ ಮತ್ತು ಪೆಂಡಾಲಿಗೆ ₹59 ಲಕ್ಷ
  • ವಿದ್ಯುತ್, ಮೈಕ್ ಸಿಸ್ಟಂ, ಸಿಸಿ ಕ್ಯಾಮರಾ ಇತರೆ ₹1 ಕೋಟಿ
  • ವೇದಿಕೆ ಅಲಂಕಾರ ₹18 ಲಕ್ಷ
  • ಕುಡಿವ ನೀರು ಮತ್ತು ಶೌಚಾಲಯ ₹10 ಲಕ್ಷ
  • ಸಾಂಸ್ಕೃತಿಕ ಕಾರ್ಯಕ್ರಮಗಳು ₹25 ಲಕ್ಷ
  • ಆಹ್ವಾನ ಪತ್ರಿಕೆ ಇತರೆ ಖರ್ಚು ₹15 ಲಕ್ಷ
  • ವಿವಿಐಪಿಗಳಿಗೆ ಊಟದ ವೆಚ್ಚ ₹35 ಲಕ್ಷ
  • ಕಾಂಪೌಂಡ್ ಒಡೆದ ಪುನರ್ ನಿರ್ಮಾಣಕ್ಕಾದ ವೆಚ್ಚ ₹11 ಲಕ್ಷ
  • ಮತ್ತಿತರ ವೆಚ್ಚಗಳು ಸೇರಿ ಒಟ್ಟು ₹25 ಕೋಟಿ ಖರ್ಚು ಮಾಡಲಾಗಿದೆ.

Kiccha sudeep | ನಟ ಕಿಚ್ಚು ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು, ಆಯೋಗ ಹೇಳಿದ್ದೇನು?

error: Content is protected !!