Choradi Accident | ಚೋರಡಿ ಬಳಿ ಭೀಕರ ಅಪಘಾತ, ಮೃತರ ಸಂಖ್ಯೆ ಎಷ್ಟು? ಯಾರ‌್ಯಾರು ಸಾವು? 30 ಜನ‌ ಆಸ್ಪತ್ರೆಗೆ ಶಿಫ್ಟ್

bus accident

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಚೋರಡಿ ಸಮೀಪದ ಎರಡು ಖಾಸಗಿ‌ಬಸ್ ನಡುವೆ ಡಿಕ್ಕಿ ಸಂಭವಿಸಿ, ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರನ್ನು ಹೊಸದುರ್ಗದ ತಿಪ್ಪೇಸ್ವಾಮಿ ಎಂದು ತಿಳಿದುಬಂದಿದೆ. ಮತ್ತೊಬ್ಬ ಮೃತನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೂವರು ಗಂಭೀರ ಗಾಯಗೊಂಡಿದ್ದು, ಬಸ್ ನಲ್ಲಿ ಪ್ರಯಾಣಿಕರಿಗೆ ಗಾಯಗಳಾಗಿವೆ.
ಅಪಘಾತ ನಡೆದಿದ್ದೇ ಆಂಬ್ಯುಲೆನ್ಸ್’ಗಳ ದೌಡು
ಗುರುವಾರ ಸಂಜೆ ಅಪಘಾತ ನಡೆದಿದ್ದೇ ಆಂಬ್ಯುಲೆನ್ಸ್’ಗಳು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿವೆ.
30 ಜನ ಆಸ್ಪತ್ರೆಗೆ ದಾಖಲು
ಮೂವತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಆಯನೂರು ಸಿ.ಎಚ್.ಸಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೆಗ್ಗಾನ್ ಗೆ ಸ್ಥಳಾಂತರಿಸಲಾಗಿದೆ.

Shimoga polling | ಕಳೆದ ಚುನಾವಣೆಯ ದಾಖಲೆ ಬ್ರೇಕ್, ಈ‌ ಸಲ‌ದ ಮತದಾನ ಪ್ರಮಾಣವೆಷ್ಟು? ಕ್ಷೇತ್ರವಾರು ಮಾಹಿತಿ ಇಲ್ಲಿದೆ

error: Content is protected !!