Court news | ಫೋಟೊ ಮೇಲೆ ಅಶ್ಲೀಲವಾಗಿ ಬರೆದು ಪೋಸ್ಟ್ ಮಾಡಿದ ಮಹಿಳೆಗೆ 10 ತಿಂಗಳು ಜೈಲು

Judgement

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆರು ವರ್ಷದ ಬಾಲಕಿ ಮತ್ತವರ ಕುಟುಂಬದ ಫೋಟೊ ಮೇಲೆ ಅಶ್ಲೀಲವಾಗಿ ಬರೆದು‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ‌‌ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಹಿಳೆಗೆ ಶಿಕ್ಷೆ ವಿಧಿಸಿ ಶಿವಮೊಗ್ಗ ನ್ಯಾಯಾಲಯ (Shimoga Court) ತೀರ್ಪು ನೀಡಿದೆ.

READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಕೋಡ್, ಏನಿದರ ಪ್ರಯೋಜನಗಳೇನು?

2022ನೇ ಸಾಲಿನಲ್ಲಿ ಭದ್ರಾವತಿ (Bhadravathi) ತಾಲ್ಲೂಕಿನ 30 ವರ್ಷದ ಮಹಿಳೆಯೊಬ್ಬಳು ಹಳೇ ದ್ವೇಷದ ಹಿನ್ನೆಲೆಯಲ್ಲಿ 6 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮತ್ತು ಅವರ ಮನೆಯ ಸದಸ್ಯರ ಫೋಟೋಗಳ ಮೇಲೆ ಅಶ್ಲೀಲ ಪದಗಳನ್ನು ಬರೆದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುತ್ತಾಳೆಂದು ನೊಂದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆಗಿನ ತನಿಖಾಧಿಕಾರಿ ರಾಘವೇಂದ್ರ ಕಾಂಡಿಕೆ ಪ್ರಕರಣದ ತನಿಖೆ ಕೈಗೊಂಡು ಆರೋಪಿತಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ (Addl District and Sessions Judge) FTSC–I (POCSO)ವು ವಿಚಾರಣೆ ನಡೆಸಿ ಆರೋಪಿ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು 10 ತಿಂಗಳು ಸಾದಾ ಕಾರಾವಾಸ ಶಿಕ್ಷೆ ಮತ್ತು ₹60,000 ದಂಡ ವಿಧಿಸಿ ಆದೇಶ ನೀಡಿರುತ್ತಾರೆ. ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.

South Western Railway | ತಾಳಗುಪ್ಪ- ಬೆಂಗಳೂರು ರೈಲು‌ ತುಮಕೂರಲ್ಲೇ ಸ್ಟಾಪ್, ಹಲವು ರೈಲು ಸಂಚಾರದಲ್ಲಿ ತೊಡಕು, ಕಾರಣವೇನು?

error: Content is protected !!