E Bus Facility | ಶಿವಮೊಗ್ಗ- ಬೆಂಗಳೂರು KSRTC ಎಸಿ ಇ-ಬಸ್ ಕಾರ್ಯಾರಂಭ, ಎಷ್ಟಿದೆ ದರ? ಬಸ್ ವಿಶೇಷಗಳೇನು?

EV Bus

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್.ಆರ್.ಟಿಸಿ) ಶುಭ ಸುದ್ದಿ ನೀಡಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಸುಸಜ್ಜಿತವಾದ 10 ಇ-ಬಸ್ ( Bus) ಗಳನ್ನು ಶಿವಮೊಗ್ಗ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಶನಿವಾರ ಬಸ್ ಸೇವೆ ಆರಂಭವಾಗಿದೆ.
ಒಂದು ನೂತನ ಹವಾ ನಿಯಂತ್ರಿತ ಇ ಬಸ್ ಅನ್ನು ಶಿವಮೊಗ್ಗ- ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ 9 ಹವಾ ನಿಯಂತ್ರಿತ ಇ-ಬಸ್ ಗಳನ್ನು ಶಿವಮೊಗ್ಗ- ಬೆಂಗಳೂರು ಮಾರ್ಗದಲ್ಲಿ ಪ್ರಾರಂಭಿಸಲಾಗುವುದು.

READ | ಶಿವಮೊಗ್ಗದಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆರಂಭ, ಯಾವೆಲ್ಲ ಕೋರ್ಸ್’ಗಳು ಲಭ್ಯ? ಪೂರ್ಣ ಮಾಹಿತಿ ಇಲ್ಲಿದೆ 

ಎಷ್ಟಿದೆ ಬಸ್ ಪ್ರಯಾಣ ದರ?
ಶಿವಮೊಗ್ಗ- ಬೆಂಗಳೂರು ಮಾರ್ಗದಲ್ಲಿ ಇ-ಬಸ್ ನಲ್ಲಿ ಪ್ರಯಾಣ ಮಾಡಬೇಕಾದರೆ 600 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆಸನವನ್ನು ಆನ್ ಲೈನ್ ನಲ್ಲಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ನಿಗಮದ ಅವತಾರ್ ವೆಬ್ ಸೈಟ್’ನಲ್ಲಿ www.awatar.KSRTC.in ಲಭ್ಯವಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೆ.ಎಸ್.ಆರ್.ಟಿ.ಸಿ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಸಂಜೆ 6 ಗಂಟೆಗೆ ಬೆಂಗಳೂರು ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಟು ಶಿವಮೊಗ್ಗಕ್ಕೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ.
ಬಸ್ ವಿಶೇಷಗಳೇನು?
ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸಲಿರುವ ಎಲೆಕ್ಟ್ರಿಕ್ ಬಸ್ ಅತ್ಯಾಧುನಿಕ ಬ್ಯಾಟರಿಯನ್ನು ಹೊಂದಿದೆ. ಎರಡೂವರೆ ಗಂಟೆಗಳಲ್ಲಿ ಚಾರ್ಜ್ ಆಗಲಿದೆ. ಒಮ್ಮೆ ಚಾರ್ಜ್ ಮಾಡಿದರೆ 300 ಕಿ.ಮೀ. ಸಂಚರಿಸಬಹುದು. ಶಿವಮೊಗ್ಗದಿಂದ ರಾಜಧಾನಿಯು 270 ಕಿ.ಮೀ. ಇದ್ದು, ಒಮ್ಮೆ ಚಾರ್ಜ್ ಮಾಡಿದರೆ ಶಿವಮೊಗ್ಗಕ್ಕೆ ರೀಚ್ ಆಗಬಹುದಾಗಿದೆ. ಶಿವಮೊಗ್ಗ ಡಿಪೋದಲ್ಲಿ ಬಸ್ ಚಾರ್ಜಿಂಗ್ ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬಸ್ ಒಳಗಡೆ ಏನೇನಿದೆ?
ಇ- ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಒಳಗಡೆ ಸಿಸಿ ಕ್ಯಾಮರಾ, ಅಗ್ನಿಶಾಮಕ ಸಾಧನ, ಎಮರ್ಜನ್ಸಿ ಬಟನ್ ಗಳು, ಫಸ್ಟ್ ಏಡ್ ಕಿಟ್, ಗ್ಲಾಸ್ ಹ್ಯಾಮರ್ ಇತ್ಯಾದಿ ಸೌಲಭ್ಯಗಳಿವೆ.

Bogie engine detach | ಚಲಿಸುತ್ತಿದ್ದ ತಾಳಗುಪ್ಪ- ಬೆಂಗಳೂರು ರೈಲಿನ ಇಂಜಿನ್ ಬೇರ್ಪಟ್ಟು ಭಾಗಿ ಗೊಂದಲ, ಸ್ಥಳಕ್ಕೆ ಅಧಿಕಾರಿಗಳ ದೌಡು

error: Content is protected !!