JNNCE | ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನಲ್ಲಿ‌ ತಂತ್ರಜ್ಞಾನ ಲೋಕ ಅನಾವರಣ, ಯಾವ ಮಾದರಿಗಳು ಸ್ಪರ್ಧೆಯಲ್ಲಿ ಆಯ್ಕೆ?

JNNCE

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (JNN Engineering College) ಐಇಇಇ (IEEE) ಮಂಗಳೂರು ಉಪವಿಭಾಗ ಹಾಗೂ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ನಾವೀನ್ಯ ಯೋಜನೆಗಳ ಪ್ರದರ್ಶನ- ’ಐ ಸ್ಕ್ವೇರ್ ಕನೆಕ್ಟ್’ ಕಾರ್ಯಕ್ರಮದಲ್ಲಿ‌ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಮಾದರಿಗಳು ಗಮನ ಸೆಳೆದವು.

READ | ಶಿವಮೊಗ್ಗದಲ್ಲಿ ಬುಡಮೇಲಾಗಿ ಬಿದ್ದ ಮರಗಳು, ಮೆಸ್ಕಾಂ ಸಿಬ್ಬಂದಿ ಹೈರಾಣ, ಎಲ್ಲಿ ಏನಾಗಿದೆ?

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40 ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಅದರಲ್ಲಿ ಭಿನ್ನ, ಕ್ರಿಯಾಶೀಲ ಮತ್ತು ಸಮಾಜಮುಖಿ ಮಾದರಿಗಳನ್ನು ಬಹುಮಾನಕ್ಕೆ ಆಯ್ಕೆ‌ ಮಾಡಲಾಗಿದೆ.

  • ಕಂಪ್ಯೂಟರ್ ಸೈನ್ಸ್ ವಿಭಾಗ: ಬ್ಲಾಕ್ ಚೈನ್ ಮೂಲಕ ಹೋಂ ಆಟೊಮೇಷನ್ ಸಿಸ್ಟಂ (ಪ್ರಥಮ), ಸ್ವಯಂಚಾಲಿತ ಸ್ಯಾನಿಟರಿ ನ್ಯಾಪ್ಕಿನ್ ವಿತರಣಾ ಯಂತ್ರ (ದ್ವಿತೀಯ)
  • ಸಿಗ್ನಲ್ ಪ್ರೊಸೆಸಿಂಗ್ ವಿಭಾಗ: ಕಿವುಡ ಮತ್ತು ಮೂಕರಿಗೆ ಹ್ಯಾಂಡ್ ಗೆಸ್ಚರ್ ಗುರುತಿಸುವಿಕೆ ಮತ್ತು ಪಠ್ಯ ಧ್ವನಿ ಗುರುತಿಸುವಿಕೆ ಯೋಜನೆ (ಪ್ರಥಮ), ಕಳ್ಳತನ ವಿರೋಧಿ ರಕ್ಷಣೆಯೊಂದಿಗೆ ಸ್ಮಾರ್ಟ್ ಮೊಬೈಲ್ ಚಾರ್ಜಿಂಗ್ ಸ್ಟೇಷನ್ (ದ್ವಿತೀಯ)
  • ರೊಬೊಟಿಕ್ಸ್ ಅಟೊಮೇಷನ್ ವಿಭಾಗ: ಐಓಟಿ ಆಧಾರಿತ ಕಿಚನ್ ಮಾನಿಟರಿಂಗ್ ಸಿಸ್ಟಂ (ಪ್ರಥಮ), ವಾಹನಕ್ಕೆ ಸ್ವಯಂಚಾಲಿತ ಹೆಡ್ ಲೈಟ್ ವ್ಯವಸ್ಥೆ ( ದ್ವಿತೀಯ)
  • ಸರ್ಕ್ಯೂಟ್ಸ್ ಅಂಡ್ ಸಿಸ್ಟಮ್ ವಿಭಾಗ: ಟಿಎಲ್ಎಸ್ ಸೆಕ್ಯುರಿಟಿ ಫಿಂಗರ್ ಪ್ರಿಂಟಿಂಗ್ ನೆಟ್ವರ್ಕ್ ಟೆಸ್ಟ್ ಟರ್ (ಪ್ರಥಮ), ಗೇಮ್ ಬೇಸಡ್ ಡಿಜಿಟಲ್ ಲರ್ನಿಂಗ್ (ದ್ವಿತೀಯ)
  • ಇಂಡಸ್ಟ್ರಿಯಲ್ ಅಪ್ಲಿಕೇಶನ್ ವಿಭಾಗ: ಡಿಸೈನ್ ಅಂಡ್ ಇಂಪ್ಲಿಮೆಂಟೇಷನ್ ಆಫ್ ಸ್ಮಾರ್ಟ್ ಇನ್ವರ್ಟರ್ ಸಿಸ್ಟಮ್ (ಪ್ರಥಮ), ಸ್ಮಾರ್ಟ್ ಫಾರ್ಮಿಂಗ್ ಅಗ್ರಿಬೋಟ್ (ದ್ವಿತೀಯ) ಬಹುಮಾನ ಪಡೆದಿದೆ.

ದೊಡ್ಡ ಕನಸು ಕಾಣಿ, ಅದನ್ನು ಸಾಕಾರಗೊಳಿಸಿ
ಕಾರ್ಯಕ್ರಮ‌ ಉದ್ಘಾಟಿಸಿ‌ ಮಾತನಾಡಿದ ಐಇಇಇ ಬೆಂಗಳೂರು ವಿಭಾಗದ ಸಹ ಮುಖ್ಯಸ್ಥರಾದ ಡಾ.ಡಿ.ಎನ್ ಸುಜಾತ, ದೊಡ್ಡ ಕನಸುಗಳನ್ನು ಕಾಣುವ ಸ್ವಭಾವ ನಿಮ್ಮದಾಗಲಿ. ನಾವೀನ್ಯತೆ ಎಂಬುದು ಪ್ರತಿ ಹಂತದಲ್ಲಿ ರೂಡಿಗತವಾಗಲಿ. ನಿದ್ದೆಯಲ್ಲಿಯು ಆ ಕನಸುಗಳು ನಮ್ಮನ್ನು ಜಾಗೃತಗೊಳಿಸುತ್ತಿರಬೇಕು‌ ಎಂದು ಹೇಳಿದರು.
ಸೋಮವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಇಇಇ ಮಂಗಳೂರು ಉಪವಿಭಾಗ ಹಾಗೂ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ನಾವೀನ್ಯ ಯೋಜನೆಗಳ ಪ್ರದರ್ಶನ – ’ಐ ಸ್ಕ್ವೇರ್ ಕನೆಕ್ಟ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

READ | ಶಿವಮೊಗ್ಗದಲ್ಲಿ ದೇಶದ ಐದನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆರಂಭ, ಯಾವೆಲ್ಲ ಕೋರ್ಸ್ ಲಭ್ಯ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ರಾಷ್ಟ್ರೀಯ ಶಿಕ್ಷಣ ಸಮಿತಿ (National Education Society) ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ತಂತ್ರಜ್ಞಾನದ ಕ್ಷೇತ್ರದಲ್ಲಿ ಕಲಿಕೆಯೊಂದಿಗೆ ಪ್ರಯೋಗಗಳ ಅವಶ್ಯಕತೆಯಿದೆ. ಯಾವುದೇ ನಾವೀನ್ಯ ಪ್ರಯೋಗಗಳು ನಮ್ಮಲ್ಲಿರುವ ಕಲಿಕೆಯ ಗುಣಮಟ್ಟದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಪ್ರಾಯೋಗಿಕ ಕಲಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ. ನೀವು ರೂಪಿಸುವ ಪ್ರಯೋಗಗಳು ಕೇವಲ ಶೈಕ್ಷಣಿಕ ಸೀಮಿತತೆಗೆ ಒಳಗಾಗದೇ ಪೆಟೆಂಟ್ ಫೈಲಿಂಗ್, ಸ್ಟಾರ್ಟ್ ಅಪ್ ಗಳಿಗೆ ಬಡ್ತಿ ಪಡೆಯಲಿ ಎಂದು ಹೇಳಿದರು.
ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಕೆ.ಎಂ.ಪೂರ್ಣಿಮಾ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಸ್.ವಿ.ಸತ್ಯನಾರಾಯಣ, ಕಾರ್ಯಕ್ರಮ ಸಂಯೋಜಕರಾದ ಡಾ.ಜಲೇಶ್ ಕುಮಾರ್, ಡಾ.ಜಿ.ಆರ್.ಮಂಜುಳ, ಡಾ.ಎಸ್.ಎಂ.ಬೆನಕಪ್ಪ, ಆರ್.ಸುಷ್ಮಾ ಉಪಸ್ಥಿತರಿದ್ದರು.

Lightning | ಬೊಮ್ಮನಕಟ್ಟೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವು

 

error: Content is protected !!