Arrest | ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ, ಒಬ್ಬ ಅರೆಸ್ಟ್, ಅವನ ಬಳಿಯಿತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣ

Arrest

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಒಬ್ಬ ಆರೋಪಿಯನ್ನು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಬಳಿಯಿದ್ದ 1.48 ಲಕ್ಷ ರೂ. ಮೌಲ್ಯದ ಒಟ್ಟು 33 ಗ್ರಾಂ 850 ಮಿಲಿ ತೂಕದ ಬಂಗಾರದ ಆಭರಣಗಳು ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಸೂಳೆಬೈಲು ನಿವಾಸಿ ತೌಸೀಫ್/ ತೌಸೀಫ್ ವುಲ್ಲಾ/ ಟೈಗರ್ ಅಲಿಯಾಸ್ ಗೀರ್ಪಡೆ(24) ಎಂಬಾತನನ್ನು ಬಂಧಿಸಲಾಗಿದೆ.

READ | ಕೆಎಸ್ಆರ್.ಟಿಸಿ ಬಸ್- ಬೈಕ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಸಾವು

ದಾಖಲಾಗಿತ್ತು ಮನೆ ಕಳ್ಳತನ ಕೇಸ್
ಇದೇ ತಿಂಗಳು 6ನೇ ತಾರೀಕಿನಂದು ಅಶೊಕ ನಗರದ ಮಹಿಳೆಯೊಬ್ಬರು ವಾಸದ ಮನೆಯೊಂದರ ಬಾಗಿಲನ್ನು ಮುರಿದು ಯಾರೋ ಕಳ್ಳರು ಗಾಡ್ರೇಜ್ ಬೀರುವಿನಲ್ಲಿದ್ದ ನಗದು ಹಣ, ಬಂಗಾರದ ಆಭರಣಗಳು ಮತ್ತು ಮೊಬೈಲ್ ಫೋನ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದರು.
ಪ್ರಕರಣ ಬೇಧಿಸಿದ ಖಾಕಿ
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪ ವಿಭಾಗ ಎ ಪೊಲೀಸ್ ಉಪಾಧೀಕ್ಷಕ ಬಾಲರಾಜು ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಠಾಣೆಯ ಪಿಐ ಅಂಜನ್ ಕುಮಾರ್ ನೇತೃತ್ವದಲ್ಲಿ, ಸಿಬ್ಬಂದಿ ವಸಂತ್, ಉಮಾ ಪಾಟೀಲ್, ಚಂದ್ರಶೇಖರ್, ಪಾಲಾಕ್ಷ ನಾಯ್ಕ್, ಲಚ್ಚಾ ನಾಯ್ಕ್, ಚಂದ್ರಾ ನಾಯ್ಕ್, ನಿತಿನ್, ರಮೇಶ್, ಶಶಿಧರ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ತಂಡವು ಪ್ರಕರಣವನ್ನು ಬೇಧಿಸಿದೆ. ತನಿಖಾ ತಂಡದ ಉತ್ತಮ ಕಾರ್ಯವನ್ನು ಎಸ್.ಪಿ. ಪ್ರಶಂಶಿಸಿದ್ದಾರೆ.

Rashtriya Raksha University | ಶಿವಮೊಗ್ಗದಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿವಿ ಕ್ಯಾಂಪಸ್ ಆರಂಭ, ಯಾವೆಲ್ಲ ಕೋರ್ಸ್’ಗಳು ಲಭ್ಯ? ಪೂರ್ಣ ಮಾಹಿತಿ ಇಲ್ಲಿದೆ

error: Content is protected !!