Attack | ಶಿವಮೊಗ್ಗದಲ್ಲಿ ಇಬ್ಬರ ಮೇಲೆ ಅಟ್ಯಾಕ್, ಯುವಕನಿಗೆ ಹರಿತ ಆಯುದ್ಧದಿಂದ ಚುಚ್ಚಿ ಗಾಯ, ಎಲ್ಲಿ ಏನಾಗಿದೆ?

attack

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣಗಳು ನಡೆದಿದ್ದು, ಗಾಯಗೊಂಡವರನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

READ | ಶಿವಮೊಗ್ಗದಲ್ಲಿ ಹೈಟೆಕ್ ಆಗಿ ಗಾಂಜಾ ಬೆಳೆಯುತ್ತಿದ್ದ ಭಾವಿ ಡಾಕ್ಟರ್, ಅವನ ಗ್ರಾಹಕರ‌್ಯಾರು? ಸಿಕ್ಕಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಘಟನೆ 1
ವಿಜಯಕುಮಾರ್ ಹಾಗೂ ತಸ್ರು ಸಹಚರರ ನಡುವೆ ಗಲಾಟೆಯಾಗಿದ್ದು, ವಿಜಯಕುಮಾರ್’ಗೆ ಹರಿತವಾದ ಆಯುದ್ಧದಿಂದ ಚುಚ್ಚಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಯಾವ ಆಯುದ್ಧದಿಂದ ಚುಚ್ಚಲಾಗಿದೆ ಎಂಬ ವಿಚಾರ ತಿಳಿದುಬಂದಿಲ್ಲ. ಪೆಟ್ರೋಲ್ ವಿಚಾರದಲ್ಲಿ ಕಿರಕ್ ಆಗಿದ್ದು, ಘಟನೆಗೆ ಖಚಿತ ತಿಳಿದುಬರಬೇಕಿದೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಘಟನೆ 2
ಸಂದೇಶ್ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಮಾಡಿದ್ದಾನೆ. ಇದಕ್ಕೆ ಪ್ರತಿಯಾಗಿ ಇನ್ನೊಬ್ಬ ಸಹ ವಾಪಸ್ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಆಟೋ ಚಾಲನೆ ವೇಳೆ ನಿಲ್ಲಿಸಿದ್ದ ಬೈಕಿಗೆ ಆಟೋ ಸ್ಪರ್ಶಿಸಿದ್ದೇ ಜಗಳಕ್ಕೆ ಕಾರಣ ಎನ್ನಲಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

Cyber crime | ಖಾಸಗಿ ವಿಡಿಯೋ ಎಡಿಟ್ ಮಾಡಿ ಮಾನಸಿಕ ಹಿಂಸೆ, ಆರೋಪಿ ವಿರುದ್ಧ ದಾಖಲಾಯ್ತು ಕೇಸ್

error: Content is protected !!