Meeting | ಶಿರಾಳಕೊಪ್ಪದಲ್ಲಿ ಎಸ್.ಪಿ. ಮಿಥುನ್ ಕುಮಾರ್ ಪ್ರಮುಖ ಸಭೆ, ನೀಡಿದ 6 ಸೂಚನೆಗಳೇನು?

Shiralakoppa Meeting

 

 

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ
SHIRALAKOPPA: ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್ (G.K.Mithun Kumar) ನೇತೃತ್ವದಲ್ಲಿ ಮಂಚಿಕೊಪ್ಪ  (Manchikoppa) ಗ್ರಾಮದಲ್ಲಿ ಜನಸಂಪರ್ಕ ಸಭೆಯನ್ನು ನಡೆಸಲಾಯಿತು.

READ | ಮನೆಯೊಂದರ ಮೇಲೆ ಪೊಲೀಸರ ದಿಢೀರ್ ದಾಳಿ, ಇಬ್ಬರು ಅರೆಸ್ಟ್

ಸಭೆಯಲ್ಲಿ ಸಾರ್ವಜನಿಕರಿಗೆ ನೀಡಿದ ಸೂಚನೆಗಳಿವು

  1. ಗ್ರಾಮದಲ್ಲಿ ಯಾವುದೇ ಘಟನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳದೇ, ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವುದು. ಒಂದುವೇಳೆ ಕಾನೂನು ಉಲ್ಲಂಘನೆ (law violation) ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
  2. ಪೊಲೀಸ್ ಇಲಾಖೆ (shimoga police department) ವತಿಯಿಂದ ಬಕ್ರೀದ್ (Bakrid festival) ಸಂಬಂಧ ಎಲ್ಲ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ. ಎಲ್ಲ ಸಾರ್ವಜನಿಕರು ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಸೂಚಿಸಿದರು.
  3. ಎಲ್ಲ ಗ್ರಾಮಗಳಿಗೂ ಬೀಟ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಅವರು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ, ಬೀಟ್ ಸಮಿತಿ ಸದಸ್ಯರ ಸಭೆ ನಡೆಸಿ, ಅವರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದ ಬೀಟ್ ಗಳನ್ನು ನಿರ್ವಹಿಸುವ ಬಗ್ಗೆ ಸ್ಮಾರ್ಟ್ ಇ ಬೀಟ್ (police smart e beat) ಎಂಬ ತಂತ್ರಾಂಶವನ್ನು ಅಭಿವೃದ್ದಿ ಪಡಿಸಲಾಗಿದ್ದು, ಬೀಟ್ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ ಬಗ್ಗೆ ತಂತ್ರಾಂಶದಲ್ಲಿ ಅಪ್ ಡೇಟ್ ಆಗುತ್ತದೆ.
  4. ಗ್ರಾಮದಲ್ಲಿರುವ ಯುವಕರನ್ನು ಒಳಗೊಂಡ ಯುವಪಡೆಯನ್ನು ಈಗಾಗಲೇ ರಚನೆ ಮಾಡಿದ್ದು, ಯುವ ಪಡೆಯ ಸದಸ್ಯರುಗಳು, ಬೀಟ್ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ಗಸ್ತು ಮಾಡುವುದು ಹಾಗೂ ಗ್ರಾಮದಲ್ಲಿ ಯಾವದೇ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ/ ಯಾವುದೇ ಮಾಹಿತಿಗಳಿದ್ದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸುವುದು.
  5. ವಾಹನ ಸವಾರರು ಕಡ್ಡಾಯವಾಗಿ ವಾಹನಕ್ಕೆ ಸಂಬಂಧಿಸಿದ ಎಲ್ಲ ಅಗತ್ಯ ದಾಖಲಾತಿಗಳನ್ನು ಹೊಂದಿರುವುದು ಮತ್ತು ದ್ವಿ ಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ ಮೇಟ್ ಅನ್ನು ಧರಿಸುವುದು. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು (traffic rules) ಕಡ್ಡಾಯವಾಗಿ ಪಾಲನೆ ಮಾಡುವುದು.
  6. ಯಾವುದೇ ತುರ್ತು ಸಂದರ್ಭದಲ್ಲಿ ERSS – 112 ಸಹಾಯವಾಣಿಗೆ ಕರೆಮಾಡಿ ಪೊಲೀಸ್ ಸಹಾಯ ಪಡೆದುಕೊಳ್ಳುವುದು.

ಶಿಕಾರಿಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ, ಪೊಲೀಸ್ ವೃತ್ತ ನಿರೀಕ್ಷಕ ರುದ್ರೇಶ್, ಪಿಎಸ್.ಐ ಮಂಜುನಾಥ್, ಮಂಚಿಕೊಪ್ಪ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!