Dasara festival | ನೈರುತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ, ಎಷ್ಟು ರೈಲುಗಳ ಸೇವೆ ಲಭ್ಯ?

Train

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದಸರಾ ಹಬ್ಬದ (Dasara festival) ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಮೈಸೂರು(Mysuru)- ಬೆಂಗಳೂರು (Bengaluru) ಮತ್ತು ಮೈಸೂರು- ಚಾಮರಾಜನಗರ ನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಅವುಗಳ ಮಾಹಿತಿ ಕೆಳಗಿನಂತಿವೆ. ಎಸಿ ಚೇರ್ ಕಾರ್ ಬೋಗಿಗಳು ಲಾಕ್ ಸ್ಥಿತಿಯಲ್ಲಿರುತ್ತವೆ ಎಂದು ನೈರುತ್ಯ ರೈಲ್ವೆ (South Western Railway) ಸಿಪಿಆರ್.ಓ ಅನೀಶ್ ಹೆಗಡೆ ತಿಳಿಸಿದ್ದಾರೆ.

READ |  ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಯಾವಾಗಿಂದ ಆರಂಭ? ನಿತ್ಯ ವಿಶೇಷ ಅಲಂಕಾರ

1. ರೈಲು ಸಂಖ್ಯೆ 06279/06280 ಮೈಸೂರು-ಕೆ.ಎಸ್.ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ (5 ಟ್ರಿಪ್ಸ್)

  • ರೈಲು ಸಂಖ್ಯೆ 06279 ಮೈಸೂರು-ಕೆ.ಎಸ್.ಆರ್ ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 20 ರಿಂದ 24 ರವರೆಗೆ ರಾತ್ರಿ 11.15 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 2:30 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
  • ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06280 ಕೆ.ಎಸ್.ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅ.21 ರಿಂದ 25 ರವರೆಗೆ ಮುಂಜಾನೆ 3 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಅದೇ ದಿನ ಬೆಳಗ್ಗೆ 6:15 ಗಂಟೆಗೆ ಮೈಸೂರು ತಲುಪಲಿದೆ.
  • ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ನಾಗನಹಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಚಂದ್ರಗಿರಿ ಕೊಪ್ಪಳ ಹಾಲ್ಟ್, ಬ್ಯಾಡ್ರಹಳ್ಳಿ, ಯಲಿಯೂರು, ಮಂಡ್ಯ, ಹನಕೆರೆ, ಮದ್ದೂರು, ಶೆಟ್ಟಿಹಳ್ಳಿ, ಚನ್ನಪಟ್ಟಣ, ರಾಮನಗರಂ, ಬಿಡದಿ, ಹೆಜ್ಜಾಲ, ಕೆಂಗೇರಿ ಮತ್ತು ನಾಯಂಡಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ರೈಲಿನಲ್ಲಿರುವ ಸೌಲಭ್ಯಗಳು, ಕೋಚ್
ಈ ವಿಶೇಷ ರೈಲುಗಳಲ್ಲಿ ಎಸಿ ಚೇರ್ ಕಾರ್ (1), ನಾನ್ ಎಸಿ ಚೇರ್ ಕಾರ್ (18) ಮತ್ತು 2ನೇ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್/ ಅಂಗವಿಕಲ ಸ್ನೇಹಿ ಕಂಪಾರ್ಟ್ಮೆಂಟ್ (2) ಸೇರಿದಂತೆ ಒಟ್ಟು 21 ಬೋಗಿಗಳು ಹೊಂದಿರುತ್ತವೆ.

2. ರೈಲು ಸಂಖ್ಯೆ 06597/06598 ಮೈಸೂರು-ಕೆ.ಎಸ್.ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ (5 ಟ್ರಿಪ್ಸ್)

  • ರೈಲು ಸಂಖ್ಯೆ 06597 ಮೈಸೂರು-ಕೆ.ಎಸ್.ಆರ್ ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 20 ರಿಂದ 24 ರವರೆಗೆ ಮಧ್ಯಾಹ್ನ 12.15 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು ಅದೇ ದಿನ ಮಧ್ಯಾಹ್ನ 3.30 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
  • ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06598 ಕೆ.ಎಸ್.ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅಕ್ಟೋಬರ್ 20 ರಿಂದ 24 ರವರೆಗೆ ಮಧ್ಯಾಹ್ನ 3.45 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಅದೇ ದಿನ ಸಂಜೆ 7.20 ಗಂಟೆಗೆ ಮೈಸೂರು ನಿಲ್ದಾಣವನ್ನು ತಲುಪಲಿದೆ.
  • ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನ ಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ರಾಮನಗರಂ, ಚನ್ನಪಟ್ಟಣ, ಶೆಟ್ಟಿಹಳ್ಳಿ, ಮದ್ದೂರು, ಹನಕೆರೆ, ಮಂಡ್ಯ, ಯಲಿಯೂರು, ಬ್ಯಾಡರಹಳ್ಳಿ, ಚಂದ್ರಗಿರಿ ಕೊಪ್ಪಳ ಹಾಲ್ಟ್, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ವಿಶೇಷ ರೈಲುಗಳು 8 ಡೆಮು ಕಾರ್ ಬೋಗಿಗಳನ್ನು ಹೊಂದಿರುತ್ತವೆ.

3. ರೈಲು ಸಂಖ್ಯೆ 06281/06282 ಮೈಸೂರು- ಚಾಮರಾಜನಗರ- ಮೈಸೂರು ಕಾಯ್ದಿರಿಸದ ವಿಶೇಷ (1 ಟ್ರಿಪ್)

  • ರೈಲು ಸಂಖ್ಯೆ 06281 ಮೈಸೂರು-ಚಾಮರಾಜನಗರ ವಿಶೇಷ ರೈಲು ಅಕ್ಟೋಬರ್ 24 ರಂದು ರಾತ್ರಿ 11.30 ಗಂಟೆಗೆ ಮೈಸೂರಿನಿಂದ ಹೊರಟು ಮರುದಿನ ಬೆ. 1:15 ಗಂಟೆಗೆ ಕ್ಕೆ ಚಾಮರಾಜನಗರ ನಿಲ್ದಾಣವನ್ನು ತಲುಪಲಿದೆ.
  • ಅದೇರೀತಿ, ಹಿಂದಿರುಗುವ ದಿಕ್ಕಿನಲ್ಲಿ ಈ ರೈಲು (06282) ಅಕ್ಟೋಬರ್ 25 ರಂದು ಬೆಳಿಗ್ಗೆ 5 ಗಂಟೆಗೆ ಚಾಮರಾಜನಗರದಿಂದ ಹೊರಟು ಅದೇ ದಿನ ಬೆಳಗ್ಗೆ 6.50 ಕ್ಕೆ ಮೈಸೂರು ತಲುಪಲಿದೆ.
  • ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೋಳ, ತಾಂಡವಪುರ ಹಾಲ್ಟ್, ಸುಜಾತಾಪುರಂ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಟ್, ನರಸಾಂಬುಧಿ ಹಾಲ್ಟ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಮತ್ತು ಮರಿಯಾಲ್ ಗಂಗವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ವಿಶೇಷ ರೈಲುಗಳು ಸಾಮಾನ್ಯ ದ್ವಿತೀಯ ದರ್ಜೆ (13) ಮತ್ತು 2ನೇ ದರ್ಜೆ ಲಗೇಜ್ ಕಂ ಬ್ರೇಕ್ ವ್ಯಾನ್/ಅಂಗವಿಕಲ ಸ್ನೇಹಿ ಕಂಪಾರ್ಟ್ಮೆಂಟ್ (2) ಸೇರಿದಂತೆ ಒಟ್ಟು 15 ಬೋಗಿಗಳನ್ನು ಹೊಂದಿರುತ್ತವೆ.

4. ರೈಲು ಸಂಖ್ಯೆ 06283/06284 ಮೈಸೂರು-ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ (1 ಟ್ರಿಪ್)

  • ರೈಲು ಸಂಖ್ಯೆ 06283 ಮೈಸೂರು-ಚಾಮರಾಜನಗರ ವಿಶೇಷ ರೈಲು ಅ. 24 ರಂದು ರಾತ್ರಿ 9.15 ಗಂಟೆಗೆ ಮೈಸೂರಿನಿಂದ ಹೊರಟು ಅದೇ ದಿನ ರಾತ್ರಿ 11.10 ಕ್ಕೆ ಚಾಮರಾಜನಗರವನ್ನು ತಲುಪಲಿದೆ.
  • ಅದೇರೀತಿ, ಹಿಂದಿರುಗುವ ದಿಕ್ಕಿನಲ್ಲಿ ಈ ರೈಲು (06284) ಅ. 24 ರಂದು ರಾತ್ರಿ 11.30 ಗಂಟೆಗೆ ಚಾಮರಾಜನಗರದಿಂದ ಹೊರಟು ಮರುದಿನ ಬೆ. 130 ಗಂಟೆಗೆ ಮೈಸೂರು ತಲುಪಲಿದೆ.
  • ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಚಾಮರಾಜಪುರಂ, ಅಶೋಕಪುರಂ,ಕಡಕೋಳ, ತಾಂಡವಪುರ ಹಾಲ್ಟ್, ಸುಜಾತಾಪುರಂ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಟ್, ನರಸಾಂಬುಧಿ ಹಾಲ್ಟ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಮತ್ತು ಮರಿಯಾಲ್ ಗಂಗವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ವಿಶೇಷ ರೈಲುಗಳಲ್ಲಿ ಎಸಿ ಚೇರ್ ಕಾರ್ (1), ನಾನ್ ಎಸಿ ಚೇರ್ ಕಾರ್ ಸಿಟಿಂಗ್ (9), ಜನರಲ್ ಸೆಕೆಂಡ್ ಕ್ಲಾಸ್ (9) ಮತ್ತು 2ನೇ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್/ಅಂಗವಿಕಲ ಸ್ನೇಹಿ ಕಂಪಾರ್ಟ್ಮೆಂಟ್ (2) ಸೇರಿದಂತೆ 21 ಬೋಗಿಗಳು ಹೊಂದಿರುತ್ತವೆ.

Shivamogga dasara | ಶಿವಮೊಗ್ಗ ದಸರಾ, ಬರಲಿದ್ದಾರೆ ನಟ, ನಟಿಯರು, ಇಲ್ಲಿದೆ ನಮ್ಮೂರು ದಸರಾದ ಪೂರ್ಣ ವೇಳಾಪಟ್ಟಿ

error: Content is protected !!