B.S. Yediyurappa | ವಿಧಾನಸಭೆ ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

BS Yediyurappa

 

 

ಸುದ್ದಿ ಕಣಜ.ಕಾಂ‌ ಶಿವಮೊಗ್ಗ
SHIVAMOGGA: ವಿಧಾನಸಭೆ ವಿಪಕ್ಷ ನಾಯಕರನ್ನು ಶೀಘ್ರವೇ ಆಯ್ಕೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (former Chief minister B.S. Yediyurappa) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕರ ಆಯ್ಕೆ ಈಗಾಗಲೇ‌ ಸಾಕಷ್ಟು ವಿಳಂಬವಾಗಿದೆ. ಎಲ್ಲೆಡೆ‌ ಇದೇ‌ ವಿಚಾರವನ್ನು‌ ಕೇಳಲಾಗುತ್ತಿದೆ. ಇನ್ಮುಂದೆ‌ ವಿಳಂಬವಾಗುವುದಿಲ್ಲ‌ ಎಂದರು.

READ | ಶಿವಮೊಗ್ಗ- ಹೈದ್ರಾಬಾದ್, ಗೋವಾ, ತಿರುಪತಿಗೆ ವಿಮಾನ, ವೇಳಾಪಟ್ಟಿ, ಟಿಕೆಟ್ ದರವೆಷ್ಟು, ಇಲ್ಲಿದೆ‌ ಕಂಪ್ಲೀಟ್ ಮಾಹಿತ

ಬಿಜೆಪಿಯಿಂದ‌‌ ಬರ ಅಧ್ಯಯನ
ಬಿಜೆಪಿಯಿಂದ ಬರ ಅಧ್ಯಯನ ಮಾಡಲಾಗುತ್ತಿದೆ. ರಾಜ್ಯದೆಲ್ಲೆಡೆ ತಂಡವು ಭೇಟಿ ನೀಡಿ ಪರಿಶೀಲಿಸುತ್ತಿದೆ. ನ.5ರಂದು ನಡೆಯುವ ವಿ.ಐ.ಎಸ್.ಎಲ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವೂ ಬರ ಅಧ್ಯಯನ ತಂಡದೊಂದಿಗೆ ಸೇರುವೆ ಎಂದರು.
ಈಗಾಗಲೇ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ವಿಚಾರ ಹೇಳಿಕೊಂಡಿದೆ. ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ‘ಲೋಕಸಭೆ ಚುನಾವಣೆಗೆ ತಮ್ಮದೇ ಆದ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ’ ಎಂದರು.

error: Content is protected !!