Crime news | ಗಿಳಿಶಾಸ್ತ್ರ ಹೇಳುತ್ತಿದ್ದವರ‌ ಬಂಧನ | ಬೈಕ್‌ ಸವಾರ ಸ್ಥಳದಲ್ಲೇ ಸಾವು

Crime news

 

 

ಸುದ್ದಿ ಕಣಜ.ಕಾಂ ಹೊಸನಗರ
HOSANAGARA: ಹೊಸನಗರ ತಾಲೂಕು ರಿಪ್ಪನಪೇಟೆಯ ಕೆರೆಹಳ್ಳಿ‌ ಕ್ರಾಸಿನಲ್ಲಿ ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಬೆಂಗಳೂರು ಮೂಲದ ಮಂಜುನಾಥ್, ಯಲ್ಲಪ್ಪ ಎಂಬುವವರನ್ನು ಸಾಗರ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಪಂಜರದೊಳಗಿದ್ದ ಎರಡು ಗಿಳಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಿಳಿಗಳನ್ನು ಹಿಡಿದು ಪಂಜರದಲ್ಲಿಟ್ಟು ಹಿಂಸಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಸಾಗರ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಮೋದಿನಿ, ಗಣೇಶ್, ಗಿರೀಶ್, ವಿಶ್ವನಾಥ್ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Crime logo

READ | ಶಿವಮೊಗ್ಗದಲ್ಲಿ ಬೈಕ್ ವ್ಹೀಲಿಂಗ್ ಮಾಡಿದ ಯುವಕನಿಗೆ ಬಿತ್ತು ಭಾರೀ ದಂಡ

ಬೈಕ್ ಅಪಘಾತ ಸ್ಥಳದಲ್ಲೇ ಸಾವು

HOSANAGARA: ಹೊಸನಗರ ತಾಲೂಕಿನ ಮಾವಿನಹೊಳೆ ತಿರುವಿನಲ್ಲಿ ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ‌ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನ್ನು ಗರ್ತಿಕೆರೆ ಗ್ರಾಮದ ಸುಮಂತ್ (22) ಮೃತಪಟ್ಟಿದ್ದಾರೆ. ಕಂಟೈನರ್ ಲಾರಿಯು ಹೊಸನಗರ ಕಡೆಯಿಂದ ಆನಂದಪುರ ಕಡೆ ತೆರಳುತ್ತಿತ್ತು. ಬೈಕ್ ಸವಾರ ಚಿಕ್ಕಮಣತಿ ಗ್ರಾಮದ ಮತ್ತೂರಿನ ಅಕ್ಕನ ಮನೆಗೆ ತೆರಳುತ್ತಿದ್ದರು. ಆಗ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹೊಸನಗರ ಪೊಲೀಸರು‌ ಭೇಟಿ‌ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!