ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಏರ್’ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) – airport authority of India recruitment ಗ್ರಾಜ್ಯುಯೆಟ್ ಅಪ್ರೆಂಟಿಸ್, ಡಿಪ್ಲೋಮಾ ಅಪ್ರೆಂಟಿಸ್, ಐಟಿಐ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆಗೊಳಿಸಲಾಗಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಎಲ್ಲೆಲ್ಲಿ ಅವಕಾಶ?
ಎಎಐನ ಸಿವಿಲ್, ಆಟೋಮೊಬೈಲ್, ಆರ್ಕಿಟೆಕ್ಚರ್, ಕಂಪ್ಯೂಟರ್ ಸೈನ್ಸ್, ಡಾಟಾ ಅನಾಲೈಸಿಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಐಟಿ ಮೆಕ್ಯಾನಿಕಲ್ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಉದ್ಯೋಗ ಅವಕಾಶಗಳಿವೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಪದವಿ, ಡಿಪ್ಲೊಮಾ, ಐಟಿಐ ವಿದ್ಯಾರ್ಹತೆ ಹೊಂದಿರುವವರು ಶಿಶಿಕ್ಷು ತರಬೇತಿದಾರರು ಹುದ್ದೆಗೆ ಅರ್ಜಿ ಸಲ್ಲಿಸಬಹುದು. 130 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ.
READ | ಬಿಜೆಪಿ ಶಕ್ತಿ ಕೇಂದ್ರದಲ್ಲಿ ಯುವನಿಧಿಗೆ ಭರ್ಜರಿ ಚಾಲನೆ, ಸಿದ್ದರಾಮಯ್ಯ ಹೇಳಿದ್ದೇನು? ಯಾವಾಗಿಂದ ಹಣ ಜಮಾ?
ಯಾವೆಲ್ಲ ಹುದ್ದೆಗಳ ನೇಮಕಾತಿ, ಎಷ್ಟು ಹುದ್ದೆ, ವೇತನದ ವಿವರ
ಗ್ರಾಜ್ಯುಯೆಟ್ ಅಪ್ರೆಂಟೀಸ್ ಹುದ್ದೆ- 30 (15 ಸಾವಿರ ರೂ. ವೇತನ)- ಯಾವುದೇ ಪದವಿ ಉತ್ತೀರ್ಣರಾಗಿರಬೇಕು/ ವಿಭಾಗಕ್ಕೆ ಅಗತ್ಯವಿರುವ ಹುದ್ದೆಗೆ ಅನುಗುಣವಾದ ಬಿಇ ಪದವಿ
ಟೆಕ್ನಿಕಲ್ ಅಪ್ರೆಂಟೀಸ್ ಹುದ್ದೆ- 45 (12 ಸಾವಿರ ರೂ.)- ಡಿಪ್ಲೊಮಾ
ಐಟಿಐ ಟ್ರೇಡ್ ಅಪ್ರೆಂಟೀಸ್ ಹುದ್ದೆ- 55 (9 ಸಾವಿರ ರೂ.)- ಐಟಿಐ
ಹೇಗೆ ನಡೆಯಲಿದೆ ನೇಮಕಾತಿ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು
ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ- ಜ.13, 2024
ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ- ಜ.1, 2024
ವೆಬ್ ಸೈಟ್- https://www.apprenticeshipindia.gov.in/
ಏರ್’ಪೋರ್ಟ್ ಅಥಾರಿಟಿ ಆಫ್ ಇಂಡಿಯಾ JOB NOTIFICATION
ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ