BY Raghavendra | ಮಹಿಳಾ ಮತದಾರರಿಗೆ ಬೆದರಿಕೆ, ಚುನಾವಣೆ ಆಯೋಗಕ್ಕೆ ದೂರು

BY Raghavendra 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಾಂಗ್ರೆಸ್ ಸರ್ಕಾರ ಏಜೆನ್ಸಿ ಮೂಲಕ ಫೋನ್ ಮಾಡಿಸಿ ಬಿಜೆಪಿಗೆ ಮತ ಹಾಕಿದರೆ ಯೋಜನೆಗಳನ್ನು ನಿಲ್ಲಿಸುವ ಬೆದರಿಕೆ ಹಾಕುತ್ತಿದೆ ಎಂದು ಶಿವಮೊಗ್ಗ ಲೋಕಸಭೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಆರೋಪಿಸಿದರು. 

READ |  ಶಿವಮೊಗ್ಗಕ್ಕೆ ಮೋದಿ ಬಂದಾಗ ಈಶ್ವರಪ್ಪ ಗೈರಾಗಲೇನು ಕಾರಣ? ಅವರೇ ಬಿಚ್ಚಿಟ್ಟ ರಹಸ್ಯವಿದು

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳಾ ಮತದಾರರ ಬೆದರಿಸುವ ಕೆಲಸ ಮಾಡುತ್ತಿರುವ ಬಗ್ಗೆ ಬಿಜೆಪಿಯಿಂದ ಚುನಾವಣೆ ಆಯೋಗಕ್ಕೆ ದೂರು ನೀಡುವ ಚಿಂತನೆ ನಡೆದಿದೆ ಎಂದು ಹೇಳಿದರು.
“ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರುವುದಾಗಿ ಹೇಳಿ, ತಮ್ಮದೇ ಸಾಫ್ಟ್ ವೇರ್ ಇದೆ. ಬಿಜೆಪಿಗೆ ಮತ ಹಾಕಿದರೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಬೆದರಿಸಲಾಗುತ್ತಿದೆ. ಈಗಾಗಲೇ ಈ ಸಂಬಂಧ 8-10 ದೂರುಗಳು ಬಂದಿವೆ” ಎಂದು ಟೀಕಿಸಿದರು.

error: Content is protected !!